fbpx

ಅದ್ದೂರಿಯಾಗಿ ನಡೆದ ಗಣಪತಿ ದೇವಾಲಯದ ವಾರ್ಷಿಕೋತ್ಸವ

ಕುಶಾಲನಗರದ ಹೃದಯ ಭಾಗದಲ್ಲಿರುವ ಗಣಪತಿ ದೇವಾಲಯದ ವಾರ್ಷಿಕೋತ್ಸವ ಅದ್ದೂರಿಯಾಗಿ ನೆರವೇರಿತು.

ಕಳೆದ ರಾತ್ರಿ ಸುರಿದ ಮಳೆಯಿಂದ ಇಂದು ನಿಗದಿ ಪಡಿಸಿದ ಸರಿಯಾದ ಸಮಯಕ್ಕೆ ಮುಂಚಿತವಾಗಿ ದೇವಾಲಯದಲ್ಲಿ ಅಲಂಕೃತ ಗಣಪತಿಯ ಪೂಜೆ ಕೈಂಕರ್ಯ ಆರಂಭವಾಗಿದ್ದು ,ಸರಿಯಾಗಿ 8 ಗಂಟೆಗೆ ಉತ್ಸವ ಮೂರ್ತಿಯ ರಥದ ಮೆರವಣಿಗೆ ಚಾಲನೆ ದೊರೆಯುತ್ತಿದ್ದಂತೆ ಸ್ಥಳೀಯ ಭಕ್ತರು ಈಡಾಗಾಯಿ ಹೊಡೆದು ರಥಕ್ಕೆ ಚಾಲನೆ ನೀಡಲಾಯಿತು.

ಕಳೆದ ಮೂರ್ನಾಲ್ಕು ವರ್ಷಗಳಿಂದ ಪ್ರಕೃತಿ ವಿಕೋಪ,ಕೋವಿಡ್ ನಿಯಮಾನುಸಾರ ಸರಳವಾಗಿ ರಥೋತ್ಸವ ನಡೆದುಕೊಂಡು ಬರುತ್ತಿದ್ದು ಒಂದೆರಡು ಗಂಟೆಯಲ್ಲಿ ಉತ್ಸವ ಸಂಪನ್ನಗೊಂಡಿತು.

ವಾಸವಿರುವ ದೇವಾಲಯದ ಆವರಣದವರೆಗೆ ರಥಬೀದಿಯಲ್ಲಿ ಎಳೆತಂದು ಮತ್ತೆ ವಾಪಸ್ ದೇವಾಲಯದ ಆವರಣಕ್ಕೆ ತರಲಾಯಿತು.

ಮುಂಜಾಗೃತಾ ಕ್ರಮವಾಗಿ ರಥ ಬೀದಿ ಕಡೆಗೆ ವಾಹನ ಸಂಚಾರ ಬದಲಿಸಲಾಗಿತ್ತು,ಈ ಹಿಂದೆ ನಡೆಯುತ್ತಿದ್ದ ಜಾತ್ರೆಯಲ್ಲಿ ಸಂದರ್ಭ ಹಳೆ ಮಾರುಕಟ್ಟೆ ಆವರಣದ ಬಗೆಯ ಮೈದಾನದಲ್ಲಿ ವಸ್ತು ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ಗಳು ಗಮನ ಸೆಳೆಯುತ್ತದೆ,ಇದೀಗ ಸ್ಥಳೀಯರಿಗೆ ಈ ಸಂಭ್ರಮ ಅನುಭವಿಸಲು ಸಾಧ್ಯವಾಗದಿರುವುದು ಸ್ಥಳೀಯರಲ್ಲಿ ಬೇಸರ ಮೂಡಿಸಿದೆ.

error: Content is protected !!