ಅತ್ಯುತ್ತಮ ಕಾರ್ಯ ನಿರ್ವಹಣೆಗಾಗಿ ಪ್ರಶಸ್ತಿ ಪಡೆದ ಕೊಡಗು ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ

ಸಂಪಾಜೆ ಕೊಡಗು ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ. ಕರ್ನಾಟಕ ರಾಜ್ಯದ ಅಪೆಕ್ಸ್ ಬ್ಯಾಂಕ್ ನೀಡುವ ಅತ್ಯುತ್ತಮ ಕಾರ್ಯ ನಿರ್ವಹಣೆಗಾಗಿನ ಪ್ರಶಸ್ತಿಯನ್ನು ಕೊಡಗು ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಪಡೆದುಕೊಂಡಿದೆ.

ಕಳೆದ ಸಾಲಿನಲ್ಲಿ ಸಂಘದ ಕಾರ್ಯನಿರ್ವಹಣೆ ,ಸಾಲ ಮರುಪಾವತಿ ,ಸದಸ್ಯರಿಗೆ ನೀಡಿದ ಸೌಲಭ್ಯಗಳನ್ನು ಪರಿಗಣಿಸಿ ,ಈ ಪ್ರಶಸ್ತಿಯನ್ನು ನೀಡಲಾಗಿದೆ.
ರಾಜ್ಯ ಅಪೆಕ್ಸ್ ಬ್ಯಾಂಕ್ ನ ನಿರ್ದೇಶಕರೂ ,ಕೊಡಗು ಕೇಂದ್ರ ಸಹಕಾರ ಬ್ಯಾಂಕ್ ನ ಅದ್ಯಕ್ಷರು ಆದ ಶ್ರೀ ಕೊಡಂದೇರ ಬಾಂಡ್ ಗಣಪತಿ ರವರು ಪಯಸ್ವಿನಿ ಪ್ಯಾಕ್ಸ್ ಅದ್ಯಕ್ಷರಾದ ಶ್ರೀ ಅನಂತ್ ಊರುಬೈಲು ರವರಿಗೆ ಇಂದು ಮಡಿಕೇರಿ ಕೇಂದ್ರ ಸಹಕಾರ ಬ್ಯಾಂಕ್ ಸಭಾಂಗಣದಲ್ಲಿ ನಗದು ಮತ್ತು ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ರಾಜಾರಾಮ ಕಳಗಿ ,ಕಾರ್ಯ ನಿರ್ವಹಣಾದಿಕಾರಿ ಶ್ರೀ ಆನಂದ ಬಿ.ಕೆ ,ನಿರ್ದೇಶಕ ಶ್ರೀ ರಾಮಮೂರ್ತಿ ಉಂಬಳೆ ರವರು ಉಪಸ್ಥಿತರಿದ್ದರು.
ಸಂಪಾಜೆ ಪಯಸ್ವಿನಿ ಸಹಕಾರ ಸಂಘ ಕಳೆದ ಎರಡು ವರ್ಷಗಳಲ್ಲಿ ತನ್ನ ಅಭಿವೃದ್ಧಿ ಮತ್ತು ದಕ್ಷ ಕಾರ್ಯನಿರ್ವಣೆಗಾಗಿ ಸತತ ಮೂರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು ,ಸಂಘದ ಸದಸ್ಯರ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ವರದಿ : ಶಭರೀಶ್ ಕುದ್ಕಳಿ ಸಂಪಾಜೆ

error: Content is protected !!