fbpx

ಅತ್ಯಾಧುನಿಕ ಯಂತ್ರೋಪಕರಣಗಳನ್ನು ಬಳಸಿ ರಸ್ತೆ ಕಾಮಗಾರಿಗೆ ಚಾಲನೆ

ಗುಡ್ಡೆಹೊಸೂರಿನಿಂದ ಕಬ್ಬಿನಗದ್ದೆ ನಡುವಿನ ರಾಜ್ಯ ಹೆದ್ದಾರಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ಅತ್ಯಾಧುನಿಕ ಪವರ್ ಪೇವರ್ ಯಂತ್ರ ಬಳಕೆ ಮಾಡಲಾಗುತ್ತಿದೆ.

ಎಸ್ ಎಫ್ 1700 ಹೆಸರಿನ ಯಂತ್ರದಿಂದ ಕಾಂಕ್ರಿಟ್ ಮಿಶ್ರಣ ಮಾಡಲಾಗುತ್ತಿದ್ದು,ಇದು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕೆ ಬಳಸುವಂತಹ ಯಂತ್ರೋಪಕರಣವಾಗಿದೆ. ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಗಳಾದ ಮೋಹನ್ ಕುಮಾರ್ ಮತ್ತು ಪೀಟರ್ ಆಧುನಿಕ ಯಂತ್ರದ ಕಾಮಗಾರಿಗೆ ಚಾಲನೆ ನೀಡಿದ್ದಾರೆ.

error: Content is protected !!