fbpx

ಅತ್ಯಾಚಾರ ಆರೋಪಿಗೆ ಶಿಕ್ಷೆ

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೋಕು ಕೊಳ್ತೋಡು ಬೈಗೋಡು ಗ್ರಾಮದಲ್ಲಿ ಅಪ್ರಾಪ್ತೆ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಿನಾಂಕ 6-12-2018 ರಂದು ಮೊಕದ್ದಮೆ ದಾಖಲುಗೊಂಡಿದ್ದು, ಪ್ರಕರಣದ ಆರೋಪಿಗೆ ವಿರಾಜಪೇಟೆ ಗೌರವಾನ್ವಿತ ಹೆಚ್ಚುವರಿ ಸತ್ರ ನ್ಯಾಯಾಲಯವು 20 ವರ್ಷ ಶಿಕ್ಷೆ ಹಾಗು ರೂ.30,000/- ದಂಡ ವಿಧಿಸಿರುತ್ತದೆ. ಈ ಪ್ರಕರಣವನ್ನು ವಿರಾಜಪೇಟೆ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ನಿರೀಕ್ಷಕರಾದ ಶ್ರೀ ಎನ್. ಕುಮಾರ ಆರಾದ್ಯ ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಶ್ರೀ ಯಾಸಿನ್ ಅಹಮ್ಮದ್ . ಸರಕಾರಿ ಅಭಿಯೋಜಕರು ಗೌರವಾನ್ವಿತ 2 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿರಾಜಪೇಟೆ ಇವರು ವಾದವನ್ನು ಮಂಡಿಸಿದ್ದರು.

ಪ್ರಕರಣದ ಆರೋಪಿಗೆ ಶಿಕ್ಷೆಯಾಗುವಲ್ಲಿ ಕಾರಣಕರ್ತರಾದ ತನಿಖಾಧಿಕಾರಿ, ಸಹಾಯಕ ತನಿಖಾಧಿಕಾರಿ ಹಾಗು ನ್ಯಾಯಾಲಯದಲ್ಲಿ ವಾದವನ್ನು ಮಂಡಿಸಿದ ಸರಕಾರಿ ಅಭಿಯೋಜಕರ ಕಾರ್ಯವನ್ನು ಪ್ರಶಂಸಿಸಲಾಗಿದೆ.

error: Content is protected !!