ಅತ್ತ ಹಸು,ಇತ್ತ ಕುದುರೆ ಅಪಾಯದಲ್ಲಿ!


ಕೊಡಗು:ಮೇಯಲು ಬಿಟ್ಟಿದ್ದ ಹಸುವೊಂದು ಮಡಿಕೇರಿಯ ಇಂದಿರಾ ಕ್ಯಾಂಟೀನ್ ಬಳಿ ನೂತನವಾಗಿ ನಿರ್ಮಿಸಿರುವ ಕಾಂಕ್ರಿಟ್ ಚರಂಡಿಗೆ ಬಿದ್ದು ನರಳಾಡುತ್ತಿದ್ದ ಘಟನೆ ನಡೆದಿದೆ.ಮೇಲೆ ಬರಲು ಹರಸಾಹಸ ಪಡುತ್ತಿದ್ದ ವೇಳೆ ಸ್ಥಳದಲ್ಲಿದ್ದ ಆಟೋ ಚಾಲಕರು ಬಂದು ರಕ್ಷಣೆ ಮಾಡಿದ್ದಾರೆ.ಅಂದಹಾಗೆ ಈ ಚರಂಡಿ ನಿರ್ಮಾಣವಾಗಿದ್ದು ಇತ್ತೀಚೆಗಷ್ಟೆ ರಾಷ್ಟ್ರಪತಿಗಳು ಮಡಿಕೇರಿ ಆಗಮಿಸಿದ ಸಂದರ್ಭ ನಗರಸಭೆ ನಿರ್ಮಿಸಿದ ತರಾತುರಿಯ ಚರಂಡಿ.ಚರಂಡಿ ಏನೋ ಮೋಡಿದರು ಆದರೆ ಅದನ್ನು ಮುಚ್ಚದೇ ಬಿಟ್ಟಿದ್ದು ಈ ಅನಾಹುತಕ್ಕೆ ಕಾರಣ.

ಮತ್ತೊಂದೆಡೆ ಕುಶಾಲನಗರದ ಪಟ್ಟಣದಲ್ಲಿ ಆರೋಗ್ಯವಾಗಿದ್ದರೂ ಕುದುರೆಯೊಂದು ಬೀದಿ ಬೀದಿ ಅಲೆಯುತ್ತಿದೆ.ಇಲ್ಲಿನ ಗೌಡ ಸಮಾಜದ ಹಿಂಬದಿಯ ಬಡಾವಣೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದೇ ವಾರಸುದಾರರಿಲ್ಲದೆ ಓಡಾಡುತ್ತಿದೆ. ಬೀದಿಯಲ್ಲಿ ಅಡ್ಡಾಡುತ್ತಿರುವುದರಿಂದ ಸಹಜವಾಗಿ ಸಾರ್ವಜನಿಕರಲ್ಲಿ ಆತಂಕ ಉಂಟು ಮಾಡಿದೆ.

error: Content is protected !!