ಅತಿವೃಷ್ಟಿಯಿಂದ ಬೆಳೆ ನಾಶ

ಪೊನ್ನಂಪೇಟೆ ತಾಲ್ಲೂಕಿನ ಬಿರುನಾಣಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಈ ಭಾರಿ 170 ಇಂಚಿನಷ್ಟು ಮಳೆಯಾಗಿದ್ದು, ಅಪಾರ ಪ್ರಮಾಣದ ಬೆಳೆ ನಷ್ಟ ಉಂಟಾಗಿದೆ.

ಕಾಫಿ,ಕಾಳುಮೆಣಸ್ಸು, ಅಡಿಕೆ,ಬಾಳೆ ಮತ್ತು ಭತ್ತ ಬೆಳೆ ಭಾರೀ ಪ್ರಮಾಣದಲ್ಲಿ ನಾಶವಾಗಿದೆ.
ಪಂಚಾಯಿತಿಯ ವ್ಯಾಪ್ತಿಯ ಗ್ರಾಮಗಳಾದ ಬಾಡಗರಕೇರಿ, ಪೋರಾಡು, ತೆರಾಲು, ಬಿರುನಾಣಿ ಮತ್ತು ಪರಕಟಗೇರಿ ಗ್ರಾಮದಲ್ಲಿ ಅತೀ ಹೆಚ್ಚಾಗಿದ್ದು, ಕಳೆದ ಐದು ವರ್ಷದಲ್ಲಿ ಪ್ರಸಕ್ತ ವರ್ಷದಲ್ಲೇ ಅತೀ ಹೆಚ್ಚು ಎನ್ನಲಾಗಿದ್ದು,ಸೂಕ್ತ ನಷ್ಟ ಪ್ರಹಾರ ಒದಗಿಸಲು ಗ್ರಾಮಸ್ಥರು ಆಗ್ರಹಿಸಿದ್ದಾರೆ.