ಅತಿವೃಷ್ಟಿಯಿಂದ ಕಾಫಿ ಬೆಳೆಗಾರರು ಹೈರಾಣು

ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ಕಾಫಿ ಬೆಳೆಗಾರರು ಹೈರಾಣಾಗಿದ್ದಾರೆ. ಸೋಮವಾರಪೇಟೆ ಭಾಗದ ಬಹುತೇಕ ಕಾಫಿ ತೋಟದಲ್ಲಿ ಒಂದೆಡೆ ಬಸವನ ಹುಳುಗಳ ಕಾಟವಾದರೆ, ಇನ್ನೊಂದೆಡೆ ಕಾಫಿ ಕಾಯಿ ಉದುರುತ್ತಿರುವುದು ಬೆಳೆಗಾರರಲ್ಲಿ ಆತಂಕ ಮೂಡಿಸಿದೆ. ಅತೀ ಹೆಚ್ಚು ಮಳೆ ಬೀಳುವ ಚೆಟ್ಟಳ್ಳಿ, ಶಾಂತಳ್ಳಿ,ಶನಿವಾರಸಂತೆ ಭಾಗದಲ್ಲಿ ಈಗಾಗಲೇ 100 ಇಂಚಿನಷ್ಟು ಮಳೆಯಾಗಿದ್ದು ವಾತಾವರಣದ ವ್ಯಕ್ತಿರಿಕ್ತ ಪರಿಣಾಮ ಕಾಫಿ ಕಾಯಿ ಕಟ್ಟಿರುವ ಗಿಡದ ಬುಡದಲ್ಲೇ ಕೊಳೆತು ನಾಶವಾಗುತ್ತದೆ. ಇದಲ್ಲದೆ ಕೊಳೆ ರೋಗ ಸಹ ಪೀಡಿಸುತ್ತಿದೆ.

ದಕ್ಷಿಣ ಕೊಡಗಿನ ಬಿರುನಾಣಿ,ಶ್ರೀಮಂಗಲ, ಹುದಿಕೇರಿ, ಬಿ.ಶೆಟ್ಟಿಗೇರಿ ಪಂಚಾಯಿತಿಯ ವ್ಯಾಪ್ತಿಯಲ್ಲಿನ ಗ್ರಾಮಗಳು, ನಾಪೋಕ್ಲು, ಕಕ್ಕಬೆ, ನೆಲಸಿ,ಮುಕ್ಕೋಡ್ಲು, ಭಾಗಮಂಡಲ ಸೇರಿದಂತೆ ಹಲವೆಡೆ ಈ ಪ್ರದೇಶದಲ್ಲಿ ಈ ಸಮಸ್ಯೆ ಕಂಡು ಬಂದಿದೆ. ಮಳೆಗಾಲದ ಆರಂಭದಲ್ಲಿ 50 ಇಂದಿಗಿಂತ ಹೆಚ್ಚಿನ ಪ್ರಮಾಣದ ಮಳೆಯಾಗಿದೆ ಬಗ್ಗೆ ವರದಿಯಾಗಿದೆ.

ಈ ಬಗ್ಗೆ ಕಾಫಿ ಮಂಡಳಿ, ಜಿಲ್ಲಾಡಳಿತ, ಸರ್ಕಾರ ಗಮನ ಹರಿಸಿ ಕಾಫಿ ನಷ್ಟ ಸಮಸ್ಯೆ ತಕ್ಷಣ ವೇ ಸಮೀಕ್ಷೆ ನಡೆಸಿ,ಅತಿವೃಷ್ಟಿ ಪೀಡಿದ ಪ್ರದೇಶ ಎಂದು ಘೋಷಿಸುವಂತೆ ಒತ್ತಾಯಿಸಿದ್ದಾರೆ.