ಅತಂತ್ರ ಸ್ಥಿತಿ ತಲುಪಿರುವ ಖಾಸಗಿ ಬಸ್:ಲಾಕ್ಡೌನ್ ನಿಂದ ಇನ್ನು ಮುಂದೆ ರಸ್ತೆಗೆ ಇಳಿಯೋದು ಡೌಟ್

ಕೊಡಗು: ಕೊವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಕಳೆದ ವರ್ಷದಿಂದ ರಸ್ತೆಗೆ ಇಳಿಯದ ಜಿಲ್ಲೆಯ 149 ಖಾಸಗಿ ಬಸ್ ಗಳು ಇದೀಗ ಮಥ್ತೆ ಲಾಕ್ ಡೌನ್ ವಿಸ್ಥರಿಸಿರುವುದರಿಂದ ಬಸ್ ಮಾಲೀಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಕಳೆದ ಬಾರಿಯ ಲಾಕ್ಡೌನ್ ನಿಂದ ಹೊರಬರುತ್ತಿದ್ದಂತೆ ಪ್ರಯಾಣಿಕರ ಕೊರತೆ ಒಂದಡೆಯಾದರೆ,ಇನ್ನೊಂದೆಡೆ ಸಾರಿಗೆ ಬಸ್ ಗಳ ಸೇವೆಯಿಂದ ಬಾರಿ ಹೊಡೆತ ಬಿದ್ದಿತ್ತು,ಇನ್ನೇನು ತೆರಿಗೆ ಪಾವತಿಯ ಕಾರಣ ಕೆಲವೊಂದು ಬಸ್ ಗಳು ಇಲಾಖೆಗೆ ಶರಣಾಗತಿಯಾಗಿದ್ದು,ಇದೀಗ ಮತ್ತಷ್ಟು ಬಸ್ ಗಳು ಶರಣಾಗತಿ ಆಗುವ ಎಲ್ಲಾ ಲಕ್ಷಣ ಇದೆ ಎಂದು ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಮೇಶ್ ಜೋಯಪ್ಪ ತಿಳಿಸಿದ್ದಾರೆ.ಹೆಚ್ಚಿನ ತೆರಿಗೆ,ಡೀಸಲ್ ಬೆಲೆ ಏರಿಕೆ,ನಿರ್ವಹಣೆ ವೆಚ್ಚ ತೀರಾ ಅಧಿಕವಾಗಿರುವುದಲ್ಲದೆ,ಈಗಾಗಲೇ ಚಾಲಕರು,ನಿರ್ವಾಹಕರು ಪರ್ಯಾಯ ಕೆಲಸಗಳತ್ತ ಮುಖಮಾಡಿರುವುದು ಮತ್ತೊಂದು ಆತಂಕ ವಿಷಯ,ಸರ್ಕಾರ ವಿನಾಯಿತಿ ನೀಡಿದಲ್ಲಿ ಮಾತ್ರ ಖಾಸಗಿ ಬಸ್ ಭವಿಷ್ಯದಲ್ಲಿ ರಸ್ತೆಗಿಳಿಯಲಿದೆ ಎಂದು ಜೋಯಪ್ಪ ತಿಳಿಸಿದ್ದಾರೆ.

error: Content is protected !!