fbpx

ಅಚ್ಚರಿಯನ್ನುಂಟು ಮಾಡಿದೆ ಮರಗಳ ನಡುವೆ ಬೀಳುತ್ತಿರುವ ಸೋನೆ ಹನಿಗಳು

ಮಳೆಯ ಸೋಂಕಿಲ್ಲದ ವಾತಾವರಣದ ನಡುವೆಯೇ ಗಗನ ಚುಂಬಿಯಾದ ಮರಗಳ ಎಡೆಯಿಂದ ಕೇವಲ ಹತ್ತು ಅಡಿ ವಿಸ್ತೀರ್ಣದ ಪ್ರದೇಶದಲ್ಲಿ ಜಿನುಗು ಮಳೆ ನಿರಂತರವಾಗಿ ಸುರಿಯುತ್ತಿರುವ ಕೌತುಕ ಬೆಟ್ಟಗೇರಿ ಸಮೀಪ ನಡೆಯುತ್ತಿದ್ದು, ಕುತೂಹಲ ಮೂಡಿಸಿದೆ.
ಬೆಟ್ಟಗೇರಿಯಿಂದ ಸುಮಾರು ಎರಡು ಕಿ.ಮೀ. ದೂರದಲ್ಲಿ, ಮುಖ್ಯ ರಸ್ತೆಯ ಬಳಿಯಲ್ಲೆ ಭಾರೀ ಗಾತ್ರದ ಮರಗಳ ಎಡೆಯಿಂದ ನಿರಂತರವಾಗಿ ಸುರಿಯುತ್ತಿರುವ ಹನಿ ಮಳೆ ಒಂದಷ್ಟು ಪ್ರದೇಶವನ್ನು ಒದ್ದೆ ಮಾಡಿದೆ.

ಅಲ್ಪ ಪ್ರಮಾಣದ ನೀರು ಸಂಗ್ರಹವಾಗಿ ಆಶ್ಚರ್ಯವನ್ನುಂಟು ಮಾಡಿದೆ.
ವಾರದ ಹಿಂದೆ ಮಳೆÉಯಾಗುತ್ತಿದ್ದ ಅವಧಿಯಲ್ಲಿ ಇದಾವುದು ಗೋಚರಿಸುವ ಪ್ರಮೇಯವಿರಲಿಲ್ಲ. ಕಳೆದ ಕೆಲ ದಿನಗಳಿಂದ ಮಳೆ ಇಲ್ಲದ ಬಿಸಿಲ ವಾತಾವರಣ ನಡುವೆಯೂ, ರಸ್ತೆ ಬದಿಯ ಮರದ ಕೆಳ ಭಾಗ ಒದ್ದೆಯಾಗಿ, ನೀರು ನಿಂತಿರುವುದನ್ನು ಗಮನಿಸಿದ ಕೆಲವರು ಪರಿಶೀಲಿಸಿದಾಗ, ಆ ಸಣ್ಣ ಪ್ರದೇಶದಲ್ಲಿ ಜಿನುಗು ಮಳೆÉಯಾಗುತ್ತಿರುವುದನ್ನು ಗಮನಿಸಿದ್ದಾರೆ.
ವಿಷಯವರಿತ ಬೆಟ್ಟಗೇರಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾಪಂಡ ರ‍್ಯಾಲಿ ಮಾದಯ್ಯ ಅವರು ಸ್ಥಳ ಪರಿಶೀಲಿಸಿ, ಕಳೆದ ಸುಮಾರು ಹತ್ತು ದಿನಗಳಿಂದ ಮರದ ಕೆಳ ಭಾಗ ನೀರು ಹನಿ ಹನಿಯಾಗಿ ಬೀಳುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಇದು ಮರದಿಂದ ಬೀಳುತ್ತಿದೆಯೇ ಏನು ಎಂಬುದರ ಬಗ್ಗೆ ತಜ್ಞರು ಪರಿಶೀಲನೆ ನಡೆಸಬೇಕೆಂದು ತಿಳಿಸಿದ್ದಾರೆ.

ಗ್ರಾಮ ಪಂಚಾಯ್ತಿ ಪಿಡಿಓ ಉದಯ ಅವರು, ಮರದ ರೆಂಬೆಗಳ ನಡುವಿನಿಂದ ನೀರ ಹನಿಗಳು ಬೀಳುತ್ತಿದ್ದು, ಇದನ್ನು ವಿಜ್ಞಾನಿಗಳು ಪರಿಶೀಲಿಸಿ ಸತ್ಯಾಂಶ ತಿಳಿಸುವ ಅಗತ್ಯವಿರುವುದಾಗಿ ತಿಳಿಸಿದರು.

ಗ್ರಾಮಸ್ಥರಾದ ಚಳಿಯಂಡ ಗಿರೀಶ್ ಅವರು ಮಾತನಾಡಿ, ಬಿಸಿಲ ವಾತಾವರಣ ನಡುವೆ ಮಳೆ ಹನಿ ಬೀಳುತ್ತಿರುವ ಘಟನೆಯಿಂದ ಗ್ರಾಮಸ್ಥರು ವಿಸ್ಮಯಕ್ಕೆ ಒಳಗಾಗಿದ್ದಾರೆ, ಈ ಬಗ್ಗೆ ಪರಿಶೀಲನೆ ನಡೆಸಬೇಕೆಂದು ಅಭಿಪ್ರಾಯಿಸಿದ್ದಾರೆ.

error: Content is protected !!