ಅಗ್ಗವಾಗಲಿದೆ ತಾಳೆ ಎಣ್ಣೆ ಬೆಲೆ

ಮುಂದಿನ ದಿನಗಳಲ್ಲಿ ದೇಶದಲ್ಲಿ ತಾಳೆ ಎಣ್ಣೆ ಬೆಲೆ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕಾರಣ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಾಳೆ ಎಣ್ಣೆ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಪ್ರಪಂಚದಲ್ಲಿ ತಾಳೆ ಎಣ್ಣೆಯನ್ನು ಅತಿ ಹೆಚ್ಚು ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಭಾರತವೂ ಒಂದು. ಇದರಿಂದ ದೇಶದಲ್ಲಿ ಖಾದ್ಯ ತೈಲದ ಪ್ರಮಾಣ ಕಡಿಮೆಯಾಗಲಿದೆ. ಭಾರತವು ಜುಲೈನಲ್ಲಿ 530,420 ಟನ್‌ಗಳು ಮತ್ತು ಆಗಸ್ಟ್‌ನಲ್ಲಿ 994,997 ಟನ್‌ಗಳಷ್ಟು ತಾಳೆ ಎಣ್ಣೆಯನ್ನು ಆಮದು ಮಾಡಿಕೊಂಡಿದೆ.

ಸೆಪ್ಟೆಂಬರ್ ತಿಂಗಳಲ್ಲಿ 1 ಮಿಲಿಯನ್ ಟನ್ ತಾಳೆ ಎಣ್ಣೆಯನ್ನು ಆಮದು ಮಾಡಿಕೊಳ್ಳಲಾಗುವುದು ಎಂದು ತಜ್ಞರು ಅಂದಾಜಿಸಿದ್ದಾರೆ. ಆಗಸ್ಟ್ ತಿಂಗಳಲ್ಲಿ ಭಾರತ ದಾಖಲೆ ಪ್ರಮಾಣದ ತಾಳೆ ಎಣ್ಣೆಯನ್ನು ಆಮದು ಮಾಡಿಕೊಂಡಿದೆ. ಜುಲೈ ತಿಂಗಳಿಗೆ ಹೋಲಿಸಿದರೆ, ಆಗಸ್ಟ್‌ನಲ್ಲಿ ಆಮದು 87 ರಷ್ಟು ಹೆಚ್ಚಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಾಳೆ ಎಣ್ಣೆ ಬೆಲೆ ಶೇ.40ರಷ್ಟು ಕುಸಿದಿದೆ. ಒಂದು ಮೆಟ್ರಿಕ್ ಟನ್ ತಾಳೆ ಎಣ್ಣೆಯ ಬೆಲೆ 1800-1900 ಡಾಲರ್‌ಗಳಿಂದ 1000-1100 ಡಾಲರ್‌ಗಳಿಗೆ ಇಳಿದಿದೆ.

ಇದರಿಂದ ಮುಂದಿನ ದಿನಗಳಲ್ಲಿ ತಾಳೆ ಎಣ್ಣೆ ಬೆಲೆಯಲ್ಲಿ ಇಳಿಕೆಯಾಗಲಿದೆ. ಪಾಮ್ ಆಯಿಲ್ ಇತರ ಖಾದ್ಯ ತೈಲಗಳಿಗಿಂತ ಅಗ್ಗವಾಗಿದೆ. ಅದಕ್ಕಾಗಿಯೇ ಕಂಪನಿಗಳು ಹೆಚ್ಚು ತಾಳೆ ಎಣ್ಣೆಯನ್ನು ಆಮದು ಮಾಡಿಕೊಂಡಿವೆ. ಮುಂದಿನ ದಿನಗಳಲ್ಲಿ ದಸರಾ, ದೀಪಾವಳಿ, ಮದುವೆ ಸೀಸನ್ ಇರುವುದರಿಂದ ತಾಳೆ ಎಣ್ಣೆಗೆ ಬೇಡಿಕೆ ಹೆಚ್ಚಲಿದೆ. ತಾಳೆ ಎಣ್ಣೆ ಆಮದಿನ ಮೇಲೆ ಸರ್ಕಾರ ಶೇ.5.5ರಷ್ಟು ತೆರಿಗೆ ವಿಧಿಸಿದೆ.

error: Content is protected !!