ಅಗ್ಗದ ಮದ್ಯದ ಸೈಡ್ ಎಫೆಕ್ಟ್, ರಸ್ತೆ ಮಧ್ಯ ಲಾರಿ ನಿಲ್ಲಿಸಿ ನಿದ್ದೆ!

ಕಂಠಪೂರ್ತಿ ಕುಡಿದು ರಸ್ತೆ ಮಧ್ಯದಲ್ಲೇ ಲಾರಿಯನ್ನು ನಿಲ್ಲಿಸಿ ಚಾಲಕ ನಿದ್ದೆ ಮಾಡಿ ವಾಹನ ಸಂಚಾರಕ್ಕೆ ಅಡ್ಡಿ ಮಾಡಿದ ಸನ್ನಿವೇಶಕ್ಕೆ ಕುಶಾಲನಗರ ಮಡಿಕೇರಿಯ ರಾಜ್ಯ ಹೆದ್ದಾರಿ ಸಾಕ್ಷಿಯಾಗಿದೆ.

ಮಂಗಳೂರಿನಿಂದ ಕುಶಾಲನಗರಕ್ಕೆ ಟೈಲ್ಸ್ ಸಾಗಿಸುತ್ತಿದ್ದ ಲಾರಿ ಇದಾಗಿದ್ದು, ಜೊತೆಗೆ ಕ್ಲೀನರ್ ಸಹಿತ ಕುಡಿದ ಮತ್ತಿನಲ್ಲಿದ್ದನಲ್ಲದೆ, ಲಾರಿಯೊಳಗೆ ಮದ್ಯದ ಬಾಟಲಿ, ಪೊಟ್ಟಣ ದೊರೆತಿದೆ. ಸ್ಥಳೀಯರ ಆಕ್ರೋಶಕ್ಕೆ ಗುರಿಯಾದ ಚಾಲಕ ಮತ್ತು ನಿರ್ವಾಹಕ, ಅದ್ಹೇಗೋ ರಸ್ತೆ ಬದಿ ಲಾರಿ ನಿಲ್ಲಿಸಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.

error: Content is protected !!