fbpx

ಅಗಲಿದ ಮಹನೀಯರಿಗೆ ಸಂತಾಪ ಸೂಚನೆ

ಬೆಳಗಾವಿ ಸುವರ್ಣಸೌಧ,ಡಿ.13: ಇತ್ತೀಚೆಗೆ ನಿಧನರಾದ ನಟ ಪುನೀತ್, ಸಶಸ್ತ್ರಪಡೆಗಳ ಮುಖ್ಯಸ್ಥ ಬಿ.ಪಿ.ಎನ್.ರಾವತ್,ಮಾಜಿ ರಾಜ್ಯಪಾಲ ಕೆ.ರೋಸಯ್ಯ ಸೇರಿದಂತೆ ಅಗಲಿದ ಗಣ್ಯರಿಗೆ ಮೇಲ್ಮನೆಯಲ್ಲಿ ಸಂತಾಪ ಸೂಚಿಸಲಾಯಿತು. ಮಾಜಿ ಸಚಿವರಾಗಿದ್ದ ಎಸ್.ಆರ್.ಮೋರೆ, ವಿರೂಪಾಕ್ಷಪ್ಪ ಅಗಡಿ, ಸ್ವಾತಂತ್ರ್ಯ ಹೋರಾಟಗಾರ ಪಿ.ಭೋಜರಾಜ ಹೆಗ್ಡೆ, ಹಿರಿಯ ವಿದ್ವಾಂಸ ಲೇಖಕ ಹಾಗೂ ಪ್ರವಚನಕಾರರಾಗಿದ್ದ ಕೆ.ಎಸ್.ನಾರಾಯಣಚಾರ್ಯ, ಹಿರಿಯ ಬಯಲಾಟ ಕಲಾವಿದೆ ನಾಡೋಜ ಕಪಗಲ್ಲು ಪದ್ಮಮ್ಮ, ಹಿರಿಯ ನಟ ಶಿವರಾಂ ಅವರಿಗೆ ವಿಧಾನಪರಿಷತ್‍ನಲ್ಲಿ ಸಂತಾಪ ಸೂಚಿಸಲಾಯಿತು. ಸಭಾಪತಿ ಬಸವರಾಜ ಹೊರಟ್ಟಿ ಅವರು ಇತ್ತೀಚೆಗೆ ನಿಧನರಾದ ಗಣ್ಯರ ನಡೆದು ಬಂದ ದಾರಿ, ಅವರ ಸಮಾಜಮುಖಿ ಕಾರ್ಯಗಳು ಮತ್ತು ನಾಡಿಗೆ ನೀಡಿದ ಕೊಡುಗೆಯನ್ನು ಈ ಸಂದರ್ಭದಲ್ಲಿ ಸ್ಮರಿಸಿದರು. ಸಂತಾಪ ಸೂಚಕ ಗೊತ್ತುವಳಿ ಬೆಂಬಲಿಸಿ ಸಭಾನಾಯಕ ಹಾಗೂ ಸಮಾಜಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ವಿರೋಧಪಕ್ಷದ ನಾಯಕ ಎಸ್.ಆರ್.ಪಾಟೀಲ್ ಅವರು ಅವರು ಮಾತನಾಡಿದರು. ನಂತರ ಮೃತರ ಗೌರವಾರ್ಥ ಸದಸ್ಯರುಗಳು ಎದ್ದು ನಿಂತು ಒಂದು ನಿಮಿಷ ಮೌನ ಆಚರಿಸಿದರು.

error: Content is protected !!