ಅಗತ್ಯ ವಸ್ತುಗಳ ಕೊರತೆ; ಶ್ರೀಲಂಕಾದಲ್ಲಿ ಶನಿವಾರ ಸಂಜೆಯಿಂದ 36 ಗಂಟೆಗಳ ಕಾಲ ಲಾಕ್ ಡೌನ್

ಆರ್ಥಿಕ ಮುಗ್ಗಟ್ಟಿನಿಂದ ತ್ತತ್ತರಿಸಿರುವ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಜನ ದಂಗೆ ಎದ್ದಿದ್ದು ಪರಿಸ್ಥಿತಿ ನಿಭಾಯಿಸಲು ಶನಿವಾರ ಸಂಜೆಯಿಂದ 36 ಗಂಟೆಗಳ ಕರ್ಫ್ಯೂ ಜಾರಿ ಮಾಡಲಾಗಿದೆ.

ಅಗತ್ಯ ವಸ್ತುಗಳ ಪೂರೈಕೆ ಕೊರತೆಯಿಂದ ಜನ ಬೀದಿಗಿಳಿದು ಪ್ರತಿಭಟನೆ ನಡೆಸಲಾರಂಭಿಸಿದ ಕಾರಣ ಅಧ್ಯಕ್ಷ ರಾಜಪಕ್ಸೆ ತುರ್ತುಪರಿಸ್ಥಿತಿ ಘೋಷಣೆ ಮಾಡಿದ್ದಾರೆ.

ತೆರಿಗೆ ಕಡಿತ, ಸಾಲ, ಆರ್ಥಿಕ ನಿರ್ವಹಣೆ ವಿಫಲತೆಯಿಂದ ಆರ್ಥಿಕ ಮುಗ್ಗಟ್ಟು ಎದುರಿಸುವಂತಾಗಿದೆ. ಇದೆಲ್ಲದರ ಜೊತೆಗೆ ಕೊರೋನಾ ಕರಿನೆರಳಿನಿಂದ ಶ್ರೀಲಂಕ ತತ್ತರಿಸಿದೆ ಎಂದು ಅರ್ಥಶಾಸ್ತ್ರಜ್ಞರು ವಿಶ್ಲೇಷಿಸಿದ್ದಾರೆ.

ಶನಿವಾರ ಸಂಜೆ 6 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ. ಆಹಾರ, ಪೆಟ್ರೋಲ್ ಸೇರಿದಂತೆ ಅಗತ್ಯ ವಸ್ತುಗಳ ಕೊರತೆಯಿಂದ ಜನ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಘಟನೆ ಸಂಬಂಧ ಕೊಲೊಂಬೊದಲ್ಲಿ 45 ಜನರನ್ನು ವಶಕ್ಕೆ ಪಡೆಯಲಾಗಿದೆ.

error: Content is protected !!