fbpx

ಅಕ್ಷರ ಮಾಂತ್ರಿಕ ಮರೆಯಾದರೂ, ಮರೆಯಲಾಗದ ದಂತಕತೆ!

ಅಕ್ಷರ ಮಾಂತ್ರಿಕ, ಕಂಚಿನ ಕಂಠದ ಲೇಖಕ, ಸಂಪಾದಕ, ನಿರೂಪಕ, ಪತ್ರಕರ್ತ ಕಾದಂಬರಿಕಾರ ರವಿ ಬೆಳಗೆರೆ. ಅವರು ಬೆಂಗಳೂರಿನ ಪ್ರತಿಷ್ಠಿತ ಶಾಲೆ ಪ್ರಾರ್ಥನಾದ ಸಂಸ್ಥಾಪಕ. ಅವರ ಮೂರು ಆಡಿಯೋ ಸಿಡಿಗಳಲ್ಲಿನ ಅವರ ಆ ಮಾತು ಸಂದೇಶ ಇಂದಿಗೂ Ever green. ನಾನು ಚಿಕ್ಕವನಿದ್ದಾಗ ಅಚ್ಚರಿಯಿಂದ ನೋಡುತ್ತಿದ್ದ ಕ್ರೈಂ ಡೈರಿ ಕಾರ್ಯಕ್ರಮದ ನೆನಪುಗಳು ಇಂದಿಗೂ ಮನದಲ್ಲಿ ಅಚ್ಚಳಿಯದಂತೆ ಇದೆ. ಅವರ ಅಮ್ಮ ಸಿಕ್ಕಿದ್ಲು, ನೀ ಹಿಂಗೆ ನೋಡಬ್ಯಾಡ‌ ನನ್ನ, ಡಯಾನಾ, ಮುಸ್ಲಿಂ, ಹೇಳಿ ಹೋಗು ಕಾರಣ, ಮುಸ್ಲಿಂ, ಮಾಂಡೋವಿ, ಆತ್ಮ, ಹಿಮಾಗ್ನಿ, ಕಾರ್ಗಿಲ್ ಅಲ್ಲಿ 17 ದಿನಗಳು, ಸರ್ಪ ಸಂಬಂಧ, ಕಾಮರಾಜಮಾರ್ಗ, ಕಲ್ಪನಾ ವಿಲಾಸ, ರಾಜ್ ಲೀಲಾ ವಿನೋದ, ಸಮಾಧಾನ, ಬ್ಲಾಕ್ ಫ್ರೈಡೇ, ಹಿಮಾಲಯನ್ ಬ್ಲಂಡರ್, ಮಧುಮಿತಾ ಮರ್ಡರ್ ಮಿಸ್ಟ್ರಿ ಇನ್ನೂ ಹತ್ತು ಹಲವು ಪುಸ್ತಕಗಳು ಅವಿಸ್ಮರಣೀಯವಾದಂತವು.

ಅವರು ಬರೆದು ಬಿಡುಗಡೆಗೊಳಿಸಿದ ‘ಫ್ರಮ್ ಪುಲ್ವಾಮಾ’ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ನನ್ನನ್ನು ಆಹ್ವಾನ ಪತ್ರಿಕೆ ನೀಡಿ ಕರೆದಿದ್ದರು. ನಾನು ಅವರನ್ನು ಭೇಟಿಯಾಗಲು ಹೋದೆ. ಸಮಾರಂಭದ ನಡುವೆ ನನ್ನನ್ನು ಗುರುತಿಸಿ,
‘ಹೇ ಗಡವ ಬಂದ್ಯಾ ನೀನು. ಎಷ್ಟು ದಪ್ಪಗಿದ್ದಾನೆ ನೋಡಿ. ಒಂದು 120 ಕೆ.ಜಿ ತೂಕ ಇದ್ದಾನೆ ನೋಡಿ. See you must not smoke you have promised me.ನಾನು ಕರೆದದ್ದಕ್ಕೆ ಕೊಡಗಿಂದ ಬಂದಿದ್ದಾನೆ. ಇವನಂತಹ ಯುವ ಗೆಳೆಯರು ನನಗೆ ಬಹಳಷ್ಟು ಇದ್ದಾರೆ. Whatsapp ಅಲ್ಲಿ Chat ಮಾಡ್ತಾರೆ And I love them.’ ಎಂದಿದ್ದರು. ನನಗೆ ಸಂತೋಷ ಉಕ್ಕಿತ್ತು. In fact ನಾನೊಬ್ಬ ಬರಹಗಾರ, ಪತ್ರಕರ್ತನಾಗಲು ಕಾರಣರೇ ರವಿ ಬೆಳಗೆರೆ ಅವರ ಬರಹಗಳಿಂದ ಪ್ರಭಾವಿತನಾಗಿ ಈ ಫೀಲ್ಡಿಗೆ ಬಂದವನು ನಾನು. ಅವರು ಬರೆಯುತ್ತಿದ್ದ ಕೈಯಲ್ಲಿನ ನಾಡಿ ಮಿಡಿತ ನಿಂತು ಚಿರ ನಿದ್ರೆಗೆ ಜಾರಿದ್ದರೂ ಅವರು ತಮ್ಮ ಪೆನ್ನಿನ ಪವರ್ ಅಲ್ಲಿ ಮೂಡಿಸಿದ ಛಾಪು ನಮ್ಮೆಲ್ಲರ ಮನದಲ್ಲಿದೆ. ಮತ್ತು ಅವರ ಬರಹದ ಹುಚ್ಚನ್ನು ಅಸುಳ್,ನಮ್ಮಂಥಹ ಅದೆಷ್ಟೋ ಯುವ ಬರಹಗಾರರಿಗೆ ಅಂಟಿಸಿದ್ದಾರೆ. ಕನ್ನಡಕ್ಕೆ ಕ್ರೈಂ , ಸೇನೆ, ಯುದ್ಧದ ಕುರಿತಾಗಿ ಅತಿ ರಂಜನೀಯವಾಗಿ ಬರೆದವರಲ್ಲಿ ರವಿ ಬೆಳಗೆರೆ ಮುಂಚೂಣಿಯಲ್ಲಿ ನಿಲ್ಲುತ್ತಾರೆ.

ಅತಿಯಾದ ಕಷ್ಟ ಅವಮಾನಗಳನ್ನು ಸಹಿಸಿ, ಮೇಲೆ ಬಂದು 70 ಪುಸ್ತಕಗಳನ್ನು, 3 ಆಡಿಯೋ ಸಿಡಿಯನ್ನು ಮಾಡಿದ್ದಾರೆ. ಅವರ ಕಪ್ಪು ಸುಂದರಿ ‘ಹಾಯ್ ಬೆಂಗಳೂರು’ ವಾರದ ಅಚ್ಚರಿಯಾಗಿ ದಶಕಗಳ ಕಾಲ ಟ್ಯಾಬ್ಲಾಯ್ಡ್ ಪತ್ರಿಕೋದ್ಯಮದಲ್ಲಿ ಅಧಿಪತ್ಯ ಸ್ಥಾಪಿಸಿದ್ದು ಸುಳ್ಳಲ್ಲ. ನನ್ನ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ನಿಕಟ ಸಂಪರ್ಕದಲ್ಲಿದ್ದ ರವಿ ಜೀ ಅವರಿಗೆ ಶಿಕ್ಷಕರ ದಿನಾಚರಣೆಗೆ ಶುಭಾಶಯ ತಿಳಿಸಿದ್ದೆ ನಾನು. ರವಿ ಇಂದು ಅಸ್ತಂಗತವಾದರೂ ಅದರ ಬೆಳಕು ಮತ್ತೆ ಮೂಡುತ್ತದೆ ಹಾಗೆಯೇ ಅವರು ಇಂದು ವಿಧಿವಶರಾದರೂ, ಅವರ ಸಾಹಿತ್ಯದ ಪ್ರಭೆ ಇದ್ದೇ ಇರುತ್ತದೆ. ಅವರಿಂದ ಪ್ರಭಾವಿತರಾದ ಹಲವಾರು ಬರಹಗಾರರು ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡುತ್ತಾರೆ. ಹಾಗೆ ಅವರು  ಕನ್ನಡ ಸಾಹಿತ್ಯ ಲೋಕದಲ್ಲಿ ಜೀವಂತವಾಗಿರುತ್ತಾರೆ.

error: Content is protected !!