fbpx

ಅಕ್ರಮ ಲಾಟರಿ ಮಾರಾಟ ಪ್ರಕರಣ: ಇಬ್ಬರ ಬಂಧನ


ವಿರಾಜಪೇಟೆ ನಗರದಲ್ಲಿ ಅಕ್ರಮವಾಗಿ ಕೇರಳ ರಾಜ್ಯದ ಲಾಟರಿಯನ್ನು ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ವಿರಾಜಪೇಟೆ ನಗರ ಠಾಣೆ ಪೊಲೀಸರು ಪತ್ತೆ ಮಾಡಿ ಆರೋಪಿಗಳಾದ ವಿರಾಜಪೇಟೆ ನಗರದ ನಿವಾಸಿ ಜಾನ್‌ ತೊಮೋತಿ ಕ್ರಾಸ್ತ ಮತ್ತು ಆರ್ಜಿ ಗ್ರಾಮದ ನಿವಾಸಿ ಅಶೋಕ್‌ ಕುಮಾರ್‌ ಎಂಬುವವರನ್ನು ದಸ್ತಗಿರಿ ಮಾಡಿ ಬಂಧಿತರಿಂದ ₹.1,50,000 ಮೌಲ್ಯದ ಲಾಟರಿ ಟಿಕೇಟ್‌ಗಳು ಮತ್ತು ₹. 1000 ನಗದು ವಶಪಡಿಸಿಕೊಂಡಿದ್ದಾರೆ. ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಿದೆ.

error: Content is protected !!