ಅಕ್ರಮ ಮರಳುಗಾರಿಕೆ ಅಡ್ಡೆ ಮೇಲೆ ದಾಳಿ:20 ಲಕ್ಷ ಮೌಲ್ಯದ ಮಾಲು ವಶ

ಕೊಡಗು: ಯಾಂತ್ರಿಕಾ ಬೋಟ್ ಗಳನ್ನು ಬಳಸಿಕೊಂಡು ಕೊಡ್ಲಿಪೇಟೆಯ ಚಿಕ್ಕಕೊಡ್ಲಿ ಭಾಗದ ಹೇಮಾವತಿ ಹೊಳೆಯಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿರುವ ಅಡ್ಡೆ ಮೇಲೆ ದಾಳಿ ನಡೆದಿದೆ.ಜಿಲ್ಲಾ ಅಪರಾಧ ಪತ್ತೆ ದಳಕ್ಕೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಇನ್ಸ್ಪೆಕ್ಟರ್ ಕುಮಾರ್ ಆರಾಧ್ಯ ಮತ್ತು ಡಿ ಸಿ ಐ ಬಿ ತಂಡ ದಾಳಿ ಮಾಡ 20 ಲಕ್ಷ ಮೌಲ್ಯದ ಎರಡು ಟ್ರ್ಯಾಕ್ಟರ್, ಒಂದು ಬೋಟ್, ಒಂದು ದೊಡ್ಡ ಮೋಟಾರ್, ಮರಳು ತೆಗೆಯಲು ಬಳಸುವ ಪೈಪ್ ಗಳು ಹಾಗೂ ಬೋಟ್ ಬಳಸಿ ತೆಗೆದ ಮರಳು ವಶಪಡಿಸಿಕೊಳ್ಳಲಾಗಿದೆ.ದಾಳಿ ಸಂಬಂಧ ಶನಿವಾರ ಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!