ಅಕ್ರಮ ಬೀಟೆ ಮರ ಸಾಗಾಟ ಜಾಲ ಪತ್ತೆ

ಕುಶಾಲನಗರ ತಾಲ್ಲೂಕಿನ ಮೀನುಕೂಲ್ಲಿಯಲ್ಲಿ ಅಕ್ರಮ ಬೀಟೆ ಮರ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದಿದ್ದಾರೆ.
ವಿರಾಜಪೇಟೆಯ ಶ್ರೀಮಂಗಲ ಭಾಗದಿಂದ 32 ಬೀಟೆ ಮರವನ್ನು ಭತ್ತದ ಹಿಟ್ಟಿನ ಮಧ್ಯೆ ಸಾಗಿಸುತ್ತಿದ್ದ ಲಾರಿ ಮತ್ತು ಮರವನ್ನು ವಶಕ್ಕೆ ಪಡೆಯಲಾಗಿದೆ.
ಲಾರಿ ಮತ್ತು ಬೀಟೆ ಮರ ಸೇರಿ
ಅಂದಾಜು 20 ಲಕ್ಷ ದಷ್ಟು ಮಾಲನ್ನು ವಶಕ್ಕೆ ಪಡೆಯಲಾಗಿದ್ದು ಲಾರಿ ಚಾಲಕ ಪುತ್ತೂರಿನ ಅಬ್ದುಲ್ ಸಲೀಂ ಎಂಬಾತನನ್ನು ಬಂಧಿಸಲಾಗಿದೆ