ಅಕ್ರಮ ಗೋ ಸಾಗಾಟ ಪ್ರಕರಣ ಪತ್ತೆ

ಕೊಡಗು(ಪೆರಂಬಾಡಿ): ಮೇಯಲು ಬಿಟ್ಟಿದ್ದ ಎಮ್ಮೆಗಳನ್ನು ಖಸಾಯಿಖಾನೆಗೆ ಸಾಗಿಸುತ್ತಿದ್ದ ವೇಳೆ ಪೋಲಿಸರು ಅಮಾಯಕ ಜಾನುವಾರುಗಳನ್ನು ವಶಕ್ಕೆ ಪಡೆಯಲಾಗಿದೆ. ಬಯಲು ಸೀಮೆ ವ್ಯಾಪ್ತಿಯಿಂದ ಅಂದಾಜು 35 ದಷ್ಟಪುಷ್ಟ ಎಮ್ಮೆ ಮತ್ತು ಕೋಣಗಳನ್ನು ಕೇರಳಕ್ಕೆ ಸಾಗಿಸುತ್ತಿದ್ದ ಸಂದರ್ಭ ಪೆರುಂಬಾಡಿ ಚೆಕ್ಪೋಸ್ಟ್ ನಲ್ಲಿ ಇದ್ದ ಕರ್ತವ್ಯ ನಿರತ ವಿರಾಜಪೇಟೆ ಪೋಲಿಸರು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.