ಅಕ್ರಮ ಗೋವು ಸಾಗಾಟ

ಕೊಡಗು(ಶ್ರೀಮಂಗಲ): ವಿರಾಜಪೇಟೆ ತಾಲ್ಲೂಕಿನ ಶ್ರೀಮಂಗಲ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿನ ತೆರಾಲು ಗ್ರಾಮದಿಂದ ಕೇರಳಕ್ಕೆ ಅಕ್ರಮ ಗೋವು ಸಾಗಾಟ ಮಾಡುತ್ತಿದ್ದವರನ್ನು ಬಂಧಿಸಲಾಗಿದೆ. ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮಂಚಯ್ಯ ಮತ್ತು ಸಿಬ್ಬಂದಿಗಳು ಖಚಿತ ಮಾಹಿತಿ ಮೇರೆಗೆ ಶ್ರೀಮಂಗಲ ಜೂನಿಯರ್ ಕಾಲೇಜಿನ ಬಳಿ ದಾಳಿ ನಡೆಸಿ, ಪಿಕಪ್ ವಾಹನ 6 ಗೋವುಗಳನ್ನು ರಕ್ಷಿಸಿದ್ದು ಜಿಯಾದ್,ಭವನ್ ಎಂಬುವವರನ್ನು ಬಂಧಿಸಲಾಗಿದೆ. ಕಾರ್ಯಾಚರಣೆ ವೇಳೆ ಮತ್ತಿಬ್ಬರು ಆರೋಪಗಳಾದ ಉಬೈದ್ ಮತ್ತು ನಿಜಾಸ್ ಪರಾರಿಯಾಗಿದ್ದಾರೆ.