ಅಕ್ರಮ ಗೋಮಾಂಸ ಸಾಗಾಟ ಆರೋಪ: ಪ್ರಮುಖ ಆರೋಪಿ ಬಂಧನ

ಕಳೆದ ಸೋಮವಾರ ನಾಪೋಕ್ಲು ಸಂತೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಗೋ ಮಾಂಸವನ್ನು ಹೊತ್ತು ಬಹಿರಂಗವಾಗಿ ಚೋನಾಕೆರೆ ಬಳಿ ಸಾಗುತ್ತಿದ್ದ ವೇಳೆ ಪೊಲೀಸರು ವಿಚಾರಣೆ ನಡೆಸಿದ ಸಂದರ್ಭ ಗೋ ಮಾಂಸ ಇರುವುದನ್ನು ಖಚಿತ ಪಡಿಸಿ, ಅಸ್ಸಾಮಿನ ಕಾರ್ಮಿಕ ಆರೋಪಿಗಳನ್ನು ಬಂಧಿಸಿದ್ದರು.
ಈ ಸಂಬಂಧ ಪ್ರಮುಖ ಆರೋಪಿ ತಲೆ ಮರೆಸಿಕೊಂಡಿದ್ದ ಅಸ್ಸಾಮಿನ ಚಾನ್ಮಿಯಾ ಅಲಿ(27) ನನ್ನು ಬಂಧಿಸಿ ನಾಪೋಕ್ಲು ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.