ಅಕ್ರಮ ಎರಡು ತಲೆ ಹಾವು ಮಾರಾಟ ಪ್ರಕರಣ

ಕೊಡಗು ಕೇರಳ ಗಡಿ ಭಾಗದಲ್ಲಿರುವ ಪೆರುಂಬಾಡಿ ರಾಜ್ಯ ಹೆದ್ದಾರಿಯಲ್ಲಿ ವ್ಯಕ್ತಿಗಳು ರೆಡ್ ಸ್ಯಾಂಡ್ ಬೋವಾ (ಎರಡು ತಲೆ ಹಾವು) ಮಾರಾಟ ಮಾಡುತ್ತಿದ್ದ ವೇಳೆ ವಿರಾಜಪೇಟೆ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ದಾಳಿ ನಡೆಸಿ ಇಬ್ಬರನ್ನು ಬಂಧಿಸಿ ಹಾವನ್ನು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ಹಾಸನ ಮೂಲದ ಪುನೀತ್ ಕುಮಾರ್ ಮತ್ತು ಚಂದನ್ ಕುಮಾರ್ ಬಂಧಿತ ಆರೋಪಿಗಳಾಗಿದ್ದು, ಕೃತ್ಯಕ್ಕೆ ಬಳಸಿದ್ದ ಬೈಕ್ ವಶಕ್ಕೆ ಪಡೆದುಕೊಂಡು ಪೊನ್ನಂಪೇಟೆಯ ಪ್ರಧಾನ ಸಿವಿಲ್ ನ್ಯಾಯಾಲಯದ ಮುಂದೆ ಹಾಜರು ಪಡಿಸಿ 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.