ಅಕ್ರಮವಾಗಿ ದಾಸ್ತಾನು ಮಾಡಿದ್ದ ಅಕ್ಕಿ ಆಹಾರ ಇಲಾಖೆ ದಾಳಿಯಿಂದ ವಶ

ಸೋಮವಾರಪೇಟೆಯ ಮನೆಯೊಂದರಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಅನ್ನಭಾಗ್ಯ ಯೋಜನೆಗೆ ಸೇರಿದ 1650 ಕೆ.ಜಿ ಅಕ್ಕಿಯನ್ನು ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ.

ಸರ್ಕಾರದಿಂದ ಬಡವರಿಗೆ ಉಚಿತವಾಗಿ ನೀಡಲಾಗುವ ಪಡಿತರವನ್ನು ಪಟ್ಟಣದ ನಿವಾಸಿ ಪುಟ್ಟಣ್ಣ ಎಂಬಾತ ಅಕ್ಕಿಯನ್ನು ಸಂಗ್ರಹಿಸಿಟ್ಟಿದ್ದರು ಎನ್ನಲಾಗಿದೆ.
ಅಕ್ರಮ ಬಿಪಿಎಲ್ ಕಾರ್ಡ್ ಮೂಲಕ ಅಕ್ಕಿಯನ್ನು ದಾಸ್ತಾನು ಮಾಡುತ್ತಿದ್ದ ಪುಟ್ಟಣ್ಣ ತನ್ನ ಮನೆಯೊಳಗೆ ಸಂಗ್ರಹ ಮಾಡಿದ್ದ.
ವಶಪಡಿಸಿಕೊಂಡ 1650 ಕೆ.ಜಿ ಅಕ್ಕಿಯನ್ನು ಎಪಿಎಂಸಿ ಗೋದಾಮಿಗೆ ಸಾಗಿಸಿದ್ದು ಅಕ್ರಮದಲ್ಲಿ ಭಾಗಿಯಾಗಿರುವವರಿಗೆ ನೋಟಿಸ್ ಜಾರಿ ಮಾಡಲಾಗಿದೆ.