fbpx

ಅಕ್ರಮವಾಗಿ ಚಿಪ್ಪು ಹಂದಿ ಸಾಗಾಟ ನಡೆಸುತ್ತಿದ್ದ ಪ್ರಕರಣ ಪತ್ತೆ

ಅಳಿವಿನಂಚಿನಲ್ಲಿರುವ ಚಿಪ್ಪುಹಂದಿ ಅಕ್ರಮ ಸಾಗಾಟ ಮಾಡಲಾಗುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ವಿರಾಜಪೇಟೆಯ ಅರಣ್ಯ ಸಂಚಾರಿ ದಳದವರು ಯಶಸ್ವಿಯಾಗಿದ್ದಾರೆ.

ಮಾಲು ಸಮೇತ ಮೂವರ ಬಂಧನ ಮಾಡಲಾಗಿದ್ದು, ಟಿ.ಕೆ ರಾಮಪ್ಪ,ಎನ್.ಎಲ್ ವಸಂತ್ ಕುಮಾರ್,ಕೆ.ಬಿ ಸುರೇಶ್ ಬಂಧಿತರು ಎಂದು ತಿಳಿದು ಬಂದಿದೆ.

ಸುಂಟಿಕೊಪ್ಪದಿಂದ ವಿರಾಜಪೇಟೆ ಕಡೆಗೆ ಅಕ್ರಮ ಸಾಗಾಣಿಕೆ ಮಾಡುವ ವೇಳೆ ಕಾರ್ಯಾಚರಣೆ ನಡೆಸಲಾಗಿದೆ. ಬಂಧಿತರಿಂದ ಜೀವಂತ ಚಿಪ್ಪುಹಂದಿ(ಪೆಂಗೋಲಿಯನ್) ಮತ್ತು ಓಮ್ನಿ ವ್ಯಾನ್ ವಶ ಪಡಿಸಿಕೊಳ್ಳಲಾಗಿದೆ.

error: Content is protected !!