fbpx

ಅಕ್ಟೋಬರ್ 1 ಅಂತರಾಷ್ಟ್ರೀಯ ವಯೋವೃದ್ಧರ ದಿನ

-ಪ್ರತೀಕ್ ಪರಿವಾರ

ನಮ್ಮ ಜೀವನದಲ್ಲಿ ನಾವು ಬಾಲ್ಯವನ್ನು ಅನುಭವಿಸುತ್ತೇವೋ ಹಾಗೆಯೇ ವೃದ್ದಾಪ್ಯವನ್ನು ಕೂಡ ಅನುಭವಿಸಬೇಕು. ಹಿರಿಯರು(ತಂದೆ ತಾಯಿಯರು)ನ್ನು ದೇವರೆಂದು ಸಾರಿದ ಶ್ರೀ *ಶ್ರವಣಕುಮಾರ* ನಂತಹ ಪುಣ್ಯ ಪುರುಷರು ಹುಟ್ಟಿದ ಪವಿತ್ರ ಭರತಭೂಮಿಯಲ್ಲಿ ಇಂದು ವೃದ್ಧರು ಎಂದಾಕ್ಷಣ ಕೆಲವರು ಸಿಡುಕುವ ಜನರು ಹೆಚ್ಚಾಗಿದ್ದಾರೆ . ಏಕೆಂದು ಕೇಳಿದರೆ ಅವರು ಕೊಡುವ ಕಾರಣ ಹೀಗಿರುತದೆ ಅವರು ತುಂಬಾ ತೊಂದ್ರೆ ಕೊಡುತ್ತಾರೆ, ಅವರಿಗೆ ಕಾಯಿಲೆ, ಅವರ ಕಾಯಿಲೆ ನಮ್ಮ ಮಕ್ಕಳಿಗೂ ಕಾಯಿಲೆ ಬರಬಹುದು ಇತ್ಯಾದಿ ಇತ್ಯಾದಿ. ಮಕ್ಕಳೇ ತಮ್ಮ ತಂದೆ ತಾಯಿಗಳನ್ನು ವೃದ್ದಪ್ಯದ ಹೆಸರಲ್ಲಿ ಕಡೆಗಣಿಸುವುದು ಮತ್ತು ವೃದ್ದಾಶ್ರಮಕ್ಕೆ ದೂಡುತಿರುವುದು ದುರಂತವೇ ಸರಿ. ಹುಟ್ಟಿದ ಕ್ಷಣದಿಂದಲೇ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ತಮ್ಮ ಕನಸುಗಳನ್ನು ಬದಿಗಿಟ್ಟು ಮಕ್ಕಳಿಗಾಗಿಯೇ ಜೀವನ ಸವೆಸುವ ತಂದೆ ತಾಯಿಗಳನ್ನು ವೃದ್ದಶ್ರಮಕ್ಕೆ ಸೇರಿಸುವುದು ಎಷ್ಟು ಸರಿ???. ಇದು ತಂದೆ ತಾಯಿಗಳ ಕಥೆಯಾದರೆ ಇನ್ನು ಅಜ್ಜಾ ಅಜ್ಜಿಯರ ಕಥೆ ಕೇಳುವುದೇ ಬೇಡ. ತಾವಂತೂ ಮಾತನಾಡುದಿಲ್ಲ ತಮ್ಮ ಮಕ್ಕಳಿಗೂ ಮಾತನಾಡಲೂ ಬಿಡಡಿರುವುದು ವೃದ್ದರನ್ನು ಎಷ್ಟು ಗೌರವಿಸುತ್ತಾರೆ ಎಂಬುದನ್ನು ತಿಳಿಸುತದೆ. ಅಜ್ಜಿಯಂದಿರೂ ಮೊಮ್ಮಕ್ಕಳಿಗೆ ಕಥೆ ಹೇಳುತ್ತಿದ್ದರು ಎಂಬುದು ಈಗ ನೆನಪಸ್ಟೇ.

ನಾನು ಎಲ್ಲರಲ್ಲೂ ಕೇಳಿಕೊಳ್ಳುದಿಸ್ಸ್ಟೇ ಮಕ್ಕಳಿಗೆ ಶಿಕ್ಷಣಕ್ಕಿಂತ ಸಂಸ್ಕಾರವನ್ನು ಹೆಚ್ಚಾಗಿ ಕಲಿಸಿ. ಮಕ್ಕಳಿಗೆ ಸಣ್ಣವರಿರುವಾಗ ಏನನ್ನು ಕಲಿಸುತ್ತಿರೋ ಅದು ಶಾಶ್ವತ. ಶಾಲೆಯಲ್ಲಿ ಹಿರಿಯರಿಗೆ ಬಸ್ ನಲ್ಲಿ ಸೀಟು ಕೊಡಬೇಕು ಎಂಬುದನ್ನು ಕೇಳಿ ಆಯಿತು ಎಂದು ತಲೆಯಾಡಿಸಿ, ಬಸ್ನಲ್ಲಿ ಹಿರಿಯರನ್ನು ಕಂಡರೂ ಸೀಟು ಬಿಟ್ಟುಕೊಡದ ವಿದ್ಯಾರ್ಥಿಗಳನ್ನು ಸಾಮಾನ್ಯವಾಗಿ ನೋಡುತಿರುತ್ತೇವೆ. ಇದು ಶಿಕ್ಷಣಕ್ಕಿಂತ ಸಂಸ್ಕಾರ ಮುಖ್ಯ ಎಂಬುದನ್ನು ಸೂಚಿತದೆ.

ದಯವಿಟ್ಟು ಹಿರಿಯರ ಮುಂದೆ ಇಂತಹ ಕೆಲಸ ಮಾಡಬೇಡಿ. ಇದು ಅವರ ಮನಸಿಗೆ ನೋವುಂಟು ಮಾಡಬಹುದು..

ಹಿರಿಯರ ಮಾತಿಗೆ ಸದಾ ಎದುರುನುಡಿಯುವುದು

ಹಿರಿಯರಿಗೆ ಗೌರವ ನೀಡದಿರುವುದು

ಹಿರಿಯರ ಮುಂದೆ ಕಾಲ ಮೇಲೆ ಕಾಲು ಹಾಕಿ ಕೂರುವುದು

ಹಿರಿಯರ ಧಾರ್ಮಿಕ ಭಾವನೆಗಳಿಗೆ ಬೆಲೆ ನೀಡದಿರುವುದು

ಮೊಮ್ಮಕ್ಕಳನ್ನು ಮಾತಾನಾಡಲು ಬಿಡದಿರುವುದು

ಇತ್ಯಾದಿ.....

ಹಿರಿಯರನ್ನು ಅಗೌರವಿಸುವ ಮುನ್ನ ಯೋಚಿಸಿ ಜೀವನದಲ್ಲಿ ಒಂದಲ್ಲ ಒಂದು ದಿನ ವೃದ್ದಪ್ಯ ನಮಗೂ ಬರುತ್ತದೆ.

ಗೌರವಿಸಿ ವೃದ್ಧರನ್ನು
ಕಡೆಗೆಣಿಸದಿರಿ ವೃದ್ಧರನ್ನು

ಎಲ್ಲರಿಗೂ ಅಂತರಾಷ್ಟ್ರೀಯ ವಯೋವೃದ್ಧರ ದಿನದ ಶುಭಾಶಯಗಳು

error: Content is protected !!