ಅಕ್ಕಿ ತಿನ್ನಲು ಮನೆಗೆ ನುಗ್ಗಿದ ಕಾಡಾನೆ!

ಸೋಮವಾರಪೇಟೆಯ ಗಣಗೂರು ಗ್ರಾಮದ ಪಾರ್ವತಿ ಎಂಬುವವರ ಮನೆ ಮೇಲೆ ಕಾಡಾನೆಯೊಂದು ದಾಳಿ ನಡೆಸಿದ ಘಟನೆ ನಡೆದಿದೆ.
ಮನೆಯಲ್ಲಿ ಸಂಗ್ರಹಿಸಿದ್ದ ಅಕ್ಕಿಯನ್ನು ತಿನ್ನುವ ಸಲುವಾಗಿ ಕಿಟಕಿ ಮೂಲಕ ಸೊಂಡಿಲನ್ನು ಹಾಕಿದ್ದು, ಎಟುಕದಿದ್ದಾಗ ಕಿಟಕಿಯ ಸರಳನ್ನು ಮುರಿದು ಅಕ್ಕಿಯನ್ನು ತಿನ್ನಲೆತ್ನಿಸಿದೆ.
ಏಕಾಏಕಿ ಮನೆಯಲ್ಲಿ ಶಬ್ದ ಕೇಳಿ ಮನೆಯಲ್ಲಿದ್ದ ಇಬ್ಬರು ಗಾಭರಿಗೊಂಡು ಕಿರುಚಿದ ಸಂದರ್ಭ ಆನೆ ಸ್ಥಳದಿಂದ ಕಾಲ್ಕಿತ್ತಿದೆ. ದಾಳಿಯ ರಭಸಕ್ಕೆ ಕಿಟಕಿ ಮತ್ತು ಗೋಡೆ ಸಂಪೂರ್ಣ ನಜ್ಜುಗುಜ್ಜಾಗಿದೆ,ಸದ್ಯ ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೀಗ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಲಾಗಿದ್ದು, ನಷ್ಟ ಪರಿಹಾರ ನೀಡುವಂತೆ ಮನೆಯವರು ಒತ್ತಾಯಿಸಿದ್ದಾರೆ.