ಅಂದು ಹುಲಿಕೊಂದವನಿಗೆ ಹುಲಿಮದುವೆ…ಇಂದು ಹುಲಿಸಂರಕ್ಷಣೆಯ ಕಾನೂನು!

ಇಂದು ಅಂರಾಷ್ಟೀಯ ಹುಲಿದಿನ( ಜುಲೈ೨೯)

ಚಿತ್ರ ವರದಿ-ಪುತ್ತರಿರ ಕರುಣ್ ಕಾಳಯ್ಯ

ಹುಲಿಕೊಂದ ಧೀರನಿಗೆ ಕೊಡಗಿನ ಮಂದ್‌ನಲ್ಲಿ ಹುಲಿಮದುವೆ (ನರಿ ಮಂಗಲ) ಮಾಡಿ ಊರಿಗೆ ಊರೇ ಸಂಭ್ರಮಿಸುತಿದ್ದ ಬಗ್ಗೆ ಪುರಾತನ ಕಾಲದ ಇತಿಹಾಸ ಸಾರುತದೆ. ಕೊಡವ ಭಾಷೆಯಲ್ಲಿ ನರಿ ಎಂದರೆ ಹುಲಿ ಎಂದರ್ಥ. ಪೆಬ್ಬುಲಿ, ಪಟ್ಟೆ ಬಲ್ಯಪೆಬ್ಬುಲಿ, ನರಿ, ಕ್‌ರ್‌ನರಿ, ಬ್ಯಾಂಗೆನರಿ, ಕೊಯಿಕತ್ತಿಬರೆನರಿ ಹೀಗೆ ಹಲವು ಬಗೆಯ ಹುಲಿಗಳು ಕೊಡಗಿನಲ್ಲಿದ್ದ ಬಗ್ಗೆ ಹಿರಿಯರು ಹೇಳುತ್ತಾರೆ. ಆ ಕಾಲದಲ್ಲಿ ಹುಲಿಯೊಂದು ಊರಿಗೆ ಬಂದು ತೊಂದರೆ ನೀಡುತಿದ್ದರೆ, ಹುಲಿಯನ್ನು ಹೊಡೆ ದುರುಳಿಸಲು ಬೇಟೆಗಾರನಿಗೆ ಸುದ್ದಿ ತಿಳಿಸುತ್ತಿದ್ದರು. ಹುಲಿ ಬೇಟೆಯಾಡುವುದೊಂದು ಸಾಹಸವೇ ಸರಿ. ಗುಂಡಿಗೆ ಇರುವ ಬೇಟೆಗಾರನು ಬೇಟೆಗೆ ಸಿದ್ಧಗೊಂಡು ಹುಲಿಯನ್ನು ಗುಂಡಿಕ್ಕುವನು. ಆದರೂ ಸತ್ತ ಹುಲಿಯ ಹತ್ತಿರ ಯಾರೂ ಸುಳಿಯುತ್ತಿರಲಿಲ್ಲ.

ನಂತರದ ದಿನಗಳಲ್ಲಿ ಊರುಮಂದ್‌ನಲ್ಲಿ ಇಲ್ಲವದೇ ನಾಡುಮಂದಿನಲ್ಲಿ ಹುಲಿಕೊಂದ ಧೀರನಿಗೆ ನರಿಮಂಗಲ ಮಾಡಿ ಸಂಭಮಿಸುತಿದ್ದರು. ಸುಮಾರು ೭೦ರಿಂದ ೮೦ಗಳ ಹಿಂದೆ ಮರೆಯಾ ದ ಈ ನರಿಮಂಗಲ ಕೊಡವ ಜನಾಂಗದ ವೀರಪರಂಪರೆಗೊಂದು ಸಾಕ್ಷಿಯಾಗಿದೆ. ಕ್ರೂರ ಪ್ರಾಣಿಗಳಲ್ಲಿ ಅತೀ ಬಲಿಷ್ಟನೆನಿಸಿಕೊಂಡ ಹುಲಿ ಯೊಂದಿಗೆ ಕಾದಾಡಿದ ಹಲವು ಶೂರರ ಕಥೆಗಳನ್ನು ಸಾರುವ ಇತಿಹಾಸದ ಕಲ್ಲುಗಳೇ ಈಗ ಮೂಕ ಸಾಕ್ಷಿಯಾಗಿವೆ.

ದೇವರ ಹಬ್ಬಹರಿದಿನಗಳಲ್ಲಿ ಹುಲಿವೇಷಧಾರಿಗಳು ಊರಿನ ಮನೆಮನೆಗಳಿಗೆ ತೆರಳಿ ದೇವಾಲ ಯದಲ್ಲಿ ಹರಕ್ಕೆ ಒಪ್ಪಿಸಿ ಸಂಪ್ರದಾಯ ಈಗಲೂ ನಡೆದು ಬರುತಿರು ವುದು ಕೊಡಗಿನವರಿಗೂ ಹುಲಿಗೂ ಇರುವ ಸಂಬಂಧವನ್ನು ಎತ್ತಿತೋರಿಸುತ್ತದೆ. ಹಾಗೆಯೇ ಹಿಂದೆ ರಾಜರು ಹುಲಿಯೊಂದಿಗೆ ನೇರಕಾದಾಡಿ ಹುಲಿಕೊಂದ ಬಗ್ಗೆಯೂ ಇತಿಹಾಸ ಹೇಳುತ್ತದೆ.

ಕಾಲವೆಲ್ಲ ಬದಲಾದಂತೆ ಕಾನೂನು ಕಟ್ಟುಪಾಡುಗಳು ರೂಪುಗೊಂಡು ರಾಷ್ಟ್ರೀಯ ಪ್ರಾಣಿ ಎಂದೆನಿಸಿಕೊಂಡ ಹುಲಿಯನ್ನು ಬೇಟೆಯಾಡುವುದು ಘೋರ ಅಪರಾಧ ಎಂದೆಸಿಕೊಂಡಿತು.

ಹುಲಿಸಂರ‍ಕ್ಷಣೆಯ ಬಗ್ಗೆ ಎಲೆಲ್ಲೂ ಜಾಗ್ರತಿ ಮೂಡಿಸಲಾಯಿತು. ದೇಶದ ಹುಲಿ ಸಂರಕ್ಷಣೆಗಾಗಿ ೧೯೭೩ರಲ್ಲಿ ಟೈಗರ್ ಪ್ರೋಜೆಕ್ಟ್ ಅಸ್ತಿತ್ವಕ್ಕೆ ಬಂತು. ನಂತರ ಇದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವಾಗಿ ಬದಲಾಗಿ ಹುಲಿಗಳ ಉಳಿವಿಗಾಗಿ ಕೆಲಸ ಮಾಡತೊಡಗಿತು. ಸ್ಪೆಷಲ್ ಟೈಗರ್ ಪ್ರೊಟೆಕ್ಷನ್ ಫರ‍ಂ ದೇಶದಲ್ಲೇ ಮೊದಲ ಬಾರಿಗೆ ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಜಾರಿಗೊಳಿಸಲಾಯಿತು.

೨೦೧೦ರ ಜುಲೈ ೨೯ರಂದು ರಷ್ಯಾದ ಸೆಂಟ್ ಪೀಟರ್‌ಬರ್ಗ್ನಲ್ಲಿ ಮೊದಲ ಅಂತರಾಷ್ಟ್ರೀಯ ಹುಲಿ ದಿನವನ್ನು ಆಚರಿಸಲಾಯಿತು. ನಂತರದಲ್ಲಿ ಎಲ್ಲೆಡೆ ಹುಲಿ ಸಂರಕ್ಷಣೆಯ ಕುರಿತ ಚರ್ಚೆ, ಉಪನ್ಯಾಸ, ಜಾಥಾ, ವಿಚಾರ ಸಂಕೀರ್ಣ, ಛಾಯಾಚಿತ್ರಪ್ರದರ್ಶನ ದೇಶಾದಾದ್ಯಂತ ನಡೆಯತೊಡಗಿದೆ. ವಿಶ್ವದಲ್ಲಿ ಒಟ್ಟು ೬ ಜಾತಿಯ ಹುಲಿಗಳಿವೆ. ಅತಿ ಹೆಚ್ಚು ಸಂಖ್ಯೆಯ ಹುಲಿಗಳು ಏಷ್ಯಾಖಂಡದಲ್ಲಿ ಕಾಣಸಿಗುವುದೆಂದು ದಾಖಲೆಗಳು ಹೇಳುತ್ತವೆ.ವಿಶ್ವದ ಒಟ್ಟು ಹುಲಿಗಳ ಪೈಕಿ ಶೇ.೭೦ರಷ್ಟು ಸಂತತಿ ದೇಶದಲ್ಲಿದೆ. ೨೦೧೪ರ ಹುಲಿಗಣತಿಯ ಪ್ರಕಾರ ದೇಶದಲ್ಲಿ ೧೪೦೦ ಇದ್ದದು ೨೦೧೯ರಗಣತಿಯಂತೆ ಹುಲಿಗಳ ಸಂಖ್ಯೆ ಹೆಚ್ಚಾಗಿ ೨೯೬೭ ಇದ್ದು ಕರ್ನಾಟಕದಲ್ಲಿ ಕಳೆದ ನಾಲ್ಕು ವರ್ಷ ಗಳಲ್ಲಿ ೪೦೬ರಿಂದ ೫೨೪ ಏರಿಕೆಯಾಗಿದೆ. ಆದರೂ ಮೊದಲ ಸ್ಥಾನದಲ್ಲಿದಲ್ಲಿದ್ದ ಕರ್ನಾಟಕ ಎರಡನೇ ಸ್ಥಾನಕ್ಕೆ ಕುಸಿದಿದ್ದು ೫೨೬ ಹುಲಿಗಳೊಂದಿಗೆ ಮಧ್ಯಪ್ರದೇಶ ಮೊದಲ ಸ್ಥಾನಪಡೆದಿದೆ. ಉತ್ತರಖಂಡ್ ೪೪೨ ಹುಲಿ ಗಳೊಂ ದಿಗೆ ಮೂರನೇ ಸ್ಥಾನದಲ್ಲಿದೆ.

ರಾಜ್ಯದ ಬಂಡಿಪುರ ಹಾಗು ನಾಗರಹೊಳೆ ಅಭ್ಯಯಾರಣ್ಯವನ್ನು ಹುಲಿ ಸಂರಕ್ಷಿತ ಅಭಯಾರಣ್ಯವೆಂದು ಘೋಶಿಸಿ ಹುಲಿಗಳ ಸಂರಕ್ಷಣೆಗೆ ಹೆಚ್ಚಿನ ಒತ್ತುನೀಡಲಾಗುತ್ತಿದೆ. ಹುಲಿಗಳು ತಮ್ಮ ಸಂತಾನೋತ್ಪತ್ತಿ ಮಾಡುತ್ತಾ ನಿರ್ಭಯವಾಗಿ ಓಡಾಡುತ್ತಿದೆ. ಈ ವರ್ಷ ಪ್ರವಾಸಿಗರಿಗೆ ಸಫಾರಿಯ ಸಮಯದಲ್ಲಿ ನಾಗರಹೊಳೆ ಬಂಡೀಪುಗಳಲ್ಲಿ ಹೆಚ್ಚಿನ ಹುಲಿಗಳ ದರ್ಶನವಾಗಿದೆ. ಈ ಹಿಂದೆ ಅರಣ್ಯ ಇಲಾಖೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಅಂರಾಷ್ಟ್ರೀಯ ಹುಲಿದಿನವನ್ನು ಆಚರಿಸುವುದರ ಮೂಲಕ ಸಾರ್ವಜನಿಕರಲ್ಲಿ ಹಾಗು ವಿದ್ಯಾರ್ಥಿಗಳಲ್ಲಿ ಹುಲಿ ಸಂರಕ್ಷಣೆಯ ಬಗ್ಗೆ ಅರಿವನ್ನು ಮೂಡಿಸಲಾಗಿತ್ತು. ಪ್ರತೀ ವರ್ಷವೂ ಹಲವೆಡೆ ಹುಲಿದಿನವನ್ನು ಆಚರಿಸಲಾಗುತ್ತಿದೆ.
ಒಂದು ಕಡೆ ಹುಲಿ ಸಂರಕ್ಷಣೆಗೆ ಸರಕಾರ ಅರಣ್ಯ ಇಲಾಖೆ ಸಾಷ್ಟು ಕಾರ್ಯಕ್ರಮಗಳನ್ನು ಹಮ್ಮಿ ಕೊಂಡಿದೆ. ಕಾಡುಗಳು ಕಡಿಮೆಯಾದಂತೆ ಕಾಡಂಚಿನ ಭಾಗದಲ್ಲಿರುವ ಹಳ್ಳಿಗಳಿಗೆ ಆಹಾರ ಹುಡುಕಿಕೊಂಡು ಹುಲಿಗಳು ಬರುತ್ತಿರುವುದು ಆತಂಕಕಾರಿ ಯಾಗಿದೆ. ಹಸು, ನಾಯಿಕುರಿಗಳ ಮೇಲೆ ದಾಳಿ ಮಾಡುವುದರಿಂದ ಗ್ರಾಮದಲ್ಲಿ ಭಯದ ವಾತಾವರಣ ಉಂಟು ಮಾಡು ತ್ತಿದೆ. ಅರಣ್ಯ ಒತ್ತುವರಿ ಸಮಸ್ಯೆಯಿಂದ ಹುಲಿಗಳ ಆವಾಸಸ್ಥಾನಕ್ಕೆ ಕುತ್ತು ಬಂದಿದೆ. ಹೀಗಾಗಿ ಹುಲಿಗಳು ಕಾಡಿನಿಂದ ಹೊರಬರುತ್ತಿವೆ.

ವರ್ಷದಿಂದವರ್ಷ ಹುಲಿದಾಳಿಗೆ ಮನುಷ್ಯ ಹಾಗು ಸಾಕುಪ್ರಾಣಿಗಳು ಬಲಿಯಾಗುವುದರ ಜೊತೆಗೆ ಹುಲಿಗಳ ದುರ್ಮರಣ ನಡೆಯುತ್ತಿರುವುದು ವರದಿಯಾಗುತಲೇ ಇವೆ. ಅವೆಲ್ಲವೂ ನಿಯಂತ್ರಿಸುವ ಹೊಣೆ ಅರಣ್ಯ ಇಲಾಖೆಯ ಮೇಲಿದೆ. ಏನೇ ಆದರೂ ರಾಷ್ಟ್ರೀಯ ಪ್ರಾಣಿ ಹುಲಿ ಯನ್ನು ಕಾಡಿನಿಂದ ನಾಡಿಗೆ ಬರದಂತೆ ತಡೆಯುವ ಮೂಲಕ ಹುಲಿಗಳ ರಕ್ಷಣೆಯ ಹೊಣೆ ಹೊರಬೇಕಿದೆ.

error: Content is protected !!