ಅಂತರ ಜಿಲ್ಲಾ ಕಳ್ಳರ ಬಂಧನ;3.70 ಲಕ್ಷ ಮೌಲ್ಯದ ಸ್ವತ್ತು ವಶ

ಕೊಡಗು ಜಿಲ್ಲೆ ಸೇರಿದಂತೆ ರಾಜ್ಯದ ವಿವಿದೆಡೆಗಳಲ್ಲಿ ಕಳ್ಳತನದಲ್ಲಿ ತೊಡಗಿದ್ದ ಅಂತರಜಿಲ್ಲಾ ಖದೀಮರನ್ನು ಸೋಮವಾರಪೇಟೆ ತಾಲ್ಲೂಕಿನ ಪೊಲೀಸರು ಬಂಧಿಸಿದ್ದಾರೆ.

ಸೋಮವಾರಪೇಟೆಯ ಪಟ್ಟಣ ಸೇರಿದಂತೆ ಮೈಸೂರು, ಹಾಸನದಲ್ಲಿ ಚಿನ್ನಾಭರಣ, ವಾಹನ, ದೇವಾಲಯದ ಹುಂಡಿ,ಮನೆಗಳ್ಳತನ ಮಾಡುತ್ತಿದ್ದ ಚೌಡ್ಲು ಗ್ರಾಮದ ಸಂಜಯ್ ಕುಮಾರ್,ಕುಶಾಲನಗರದ ಮುಳ್ಳುಸೋಗೆ ನಿವಾಸಿ ಸುನಿಲ್ ಕುಮಾರ್, ಕರ್ಕಳ್ಳಿಯ ವಿನೋದ್ ನನ್ನು ಪೊಲೀಸರು ಹುಡುಗಿ ಕಟ್ಟಿದ್ದು,ಬಂಧಿತರಿಂದ 4 ಬೈಕ್, 20 ಗ್ರಾಂ ಚಿನ್ನಾಭರಣ, ನಗದು ಸೇರಿದಂತೆ 3.70 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನ ಕ್ಕೆ ಒಪ್ಪಿಸಲಾಗಿದೆ.

error: Content is protected !!