ಅಂತರ್ ಜಿಲ್ಲೆ ಗೋವುಗಳ್ಳರ ಬಂಧನ: ವಾಹನ, ನಗದು ವಶ

ಕೊಡಗು: ಜಿಲ್ಲೆಯ ಸುಂಠಿಕೊಪ್ಪ ಮತ್ತು ಕುಶಾಲನಗರ ಸೇರಿದಂತೆ ಹಣಸೂರು ಮೂಲದ ಗೋವುಗಳ್ಳರನ್ನು ಮೈಸೂರಿನ ಬೆಟ್ಟದಪುರ ಪೂಲಿಸರು ಬಂಧಿಸಿದ್ದಾರೆ.

ಏಕಾಂಗಿಯಾಗಿರುವ ದನಗಳನ್ನು ಅಪಹರಿಸಿ ವಾಹನದಲ್ಲಿ ತುಂಬಿ ಊರ ಹೊರಗೆ ಮಾರಾಟ ಮಾಡುತ್ತಿದ್ದ ಹುಣಸೂರಿನ ಶಿವಜೋತಿ ನಗರದಲ್ಲಿ ಮಾಂಸದ ಅಂಗಡಿಯ ಕಟುಕ ನಶ್ರುಲ್ಲಾ, ಸುಂಟಿಕೊಪ್ಪದ ಶಾಹಿಲ್ ಪಾಷಾ, ಕುಶಾಲನಗರ ಸಮೀಪದ ರಸಲ್ ಪುರದ ಜೈನುದ್ದಿನನ್ನು ಬಂಧಿಸಿ, ಕಳವು ಮಾಡಿ ಕೃತ್ಯೆಗೆ ಬಳಸಿದ 6 ಲಕ್ಷ ಮೌಲ್ಯದ ಎರಡು ಕಾರು ಮತ್ತು ಎರಡು ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದ್ದು ಬಂಧಿತರ ಬಳಿ ಮಾಂಸ ಮಾರಾಟ ಮಾಡಿದ ಒಂದು ಲಕ್ಷ ನಗದು ಹಣವನ್ನು ವಶಕ್ಕೆ ಪಡೆಯಲಾಗಿದೆ. ಹುಣಸೂರು ಪೊಲೀಸ್ ಠಾಣೆ ವ್ಯಾಪ್ತಿಯ ಕೆ.ಆರ್ ನಗರ, ಪಿರಿಯಾಪಟ್ಟಣ, ಬೆಟ್ಟದಪುರ, ಬೈಲಕುಪ್ಪೆ ಮತ್ತು ಕುಶಾಲನಗರದಲ್ಲೊಂದು ಸೇರಿದಂತೆ ಒಟ್ಟು 12 ದನಗಳ ಕಳ್ಳತನ, ಬಿಳಿಕೆರೆ, ಹುಣಸೂರಿನಲ್ಲಿ ಎರಡು ದ್ವಿಚಕ್ರವಾಹನ ಕಳ್ಳತನ, ಇಲವಾಲ ಅರಕಲಗೋಡುವಿನಲ್ಲಿ ಕಾರುಗಳ ಕಳತನ ಸೇರಿ 4 ಕಳ್ಳತನ ಪ್ರಕರಣವನ್ನು ಬೆಟ್ಟದಪುರ ಠಾಣೆಯ ಪಿಎಸ್ ಐ ಮಹೇಶ್ ಕುಮಾರ್ ಮತ್ತು ತಂಡ ಕಾರ್ಯಾಚರಣೆ ನಡೆಸಿದೆ.