ಮಡಿಕೇರಿ ಆ.5: ಕೊಡಗಿನ ಸೋಮವಾರಪೇಟೆಯವರಾದ ಅಂತರಾಷ್ಟ್ರೀಯ ಹಾಕಿ ಕ್ರೀಡಾಪಟು ಎಸ್.ವಿ ಸುನಿಲ್ ಅವರು ತಮ್ಮ ಸುದೀರ್ಘ 14 ವರ್ಷಗಳ ಅಂತರಾಷ್ಟ್ರೀಯ ಹಾಕಿಗೆ ವಿದಾಯ ಹೇಳಿದ್ದಾರೆ. ಸುನಿಲ್ (32) ಅವರು 264 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿ 72 ಗೋಲ್ ಗಳ ದಾಖಲೆ ಮಾಡಿದ್ದಾರೆ. ತಾ.2ರಂದು ಅವರು ಅಧಿಕೃತವಾಗಿ ತಮ್ಮ ನಿವೃತ್ತಿಯನ್ನು ಘೋಷಿಸಿದರು.