ಅಂತರಾಷ್ಟ್ರೀಯ ಕ್ರೀಡಾಕೂಟಕ್ಕೆ ಕೊಡಗಿನ ಯೋಧ ಆಯ್ಕೆ

ಜುಲೈ 28,2022ರಿಂದ ಇಂಗ್ಲೆಂಡಿನ ಬ್ರಿಹಿಂಗ್ಯಾಮ್ ನಲ್ಲಿ ನಡೆಯಲಿರುವ ಕಾಮನ್ ವೆಲ್ತ್ ಕ್ರೀಡಾಕೂಟ ಮತ್ತು ಸೆಪ್ಟೆಂಬರ್ 15 ರಿಂದ ಚೀನಾದ ಹ್ಯಾಂಗ್ ಜೂ ನಲ್ಲಿ ಆರಂಭವಾಗಲಿರುವ ಏಷ್ಯನ್ ಕ್ರೀಡಾಕೂಕೊಡಗು ಮೂಲದ ಬಬಿನ್ ಬೆಳ್ಯಪ್ಪ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಪ್ರಸ್ತುತ ಸೇನೆಯಲ್ಲಿರುವ ಬಬಿನ್ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದು 2017ರಲ್ಲಿ ನಡೆದ ಕ್ರಾಸ್ ಕಂಟ್ರಿಯಲ್ಲಿ ಬೆಳ್ಳಿ, 2022ರಲ್ಲಿ ಬಾಂಗ್ಲಾದೇಶದ ಡಾಕಾದಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಕಂಚು,ಮೆರಾಥನ್ ವಿಭಾಗದಲ್ಲಿ ಹಲವು ಸಾಧನೆ ಮಾಡಿದ್ದು, ಇದೀಗ 2:17:09 ನಿಮಿಷ ದಲ್ಲಿ ಸಾಧನೆ ಮಾಡುವ ಮೂಲಕ ಆಯ್ಕೆಯಾಗಿದ್ದಾರೆ.

ಇವರು ಮೂಲತಃ ಪೊನ್ನಂಪೇಟೆಯ ತಾಲ್ಲೂಕಿನ ಟಿ.ಶೆಟ್ಟಿಗೇರಿ ಗ್ರಾಮದ ಬೋಪಯ್ಯ ಮತ್ತು ರೋಜಾ ಬೊಳ್ಳಮ್ಮ ಎಂಬುವವರ ಪುತ್ರರಾಗಿದ್ದಾರೆ.

error: Content is protected !!