ಅಂತರರಾಜ್ಯ ವಾಹನ ಕಳ್ಳನ ಬಂಧನ:ಕಾರುಗಳ ವಶ

ಕೊಡಗು: ಸಾರ್ವಜನಿಕ ಸ್ಥಳದಿಂದಲೇ ವಾಹನ ಕಳ್ಳತನ ಮಾಡುತ್ತಿದ್ದ ಕೇರಳ ಮೂಲದಕಣ್ಣೂರಿನ ಆಲಕೋಡ್ ಮನ್ನಕಡವ್, ಚಿಕ್ಕಾಡ್ ಕೊಲ್ಲಕುನ್ನ ನಿವಾಸಿ ಶರಣ್ ಎಂಬುವವನನ್ನು ವಿರಾಜಪೇಟೆ ಎಂಬುವವನ್ನು ಬಂಧಿಸಿ ಎರಡು ಮಾರುತಿ ವ್ಯಾನ್ ನನ್ನು ವಶಕ್ಕೆ ಪಡೆಯಲಾಗಿದೆ.ವೃತ್ತಿಯಲ್ಲಿ ಚಾಲಕನಾಗಿರುವ ಶರಣ್ ಗಾಂಜಾ ವ್ಯಸನಿಯಾಗಿದ್ದು ಇತ್ತೀಚೆಗೆ ಬಿಟ್ಟಂಗಾಲದ ಜಗನ್ ಎಂಬುವವರ ಕಾರು ಕಳ್ಳತನ ಮಾಡಿದ್ದ ಬಳಿಕ ವಿರಾಜಪೇಟೆಯ ಶನೀಶ್ ಎಂಬುವವರ ಕಾರನ್ನು ಕಳುವು ಮಾಡಿ ಅಜ್ಞಾತ ಸ್ಥಳದಲ್ಲಿರಿಸುತ್ತಿದ್ದ.ಹೀಗೆ ಸಂಚು ನಡೆಸಿ ಕೇರಳಕ್ಕೆ ಸಾಗಿಸುವ ಸಂದರ್ಭ ಮಾಕುಟ್ಟ ಚೆಕ್ ಪೋಸ್ಟ್ ನಲ್ಲಿ ಸಿಕ್ಕಿಬಿದ್ದಿದ್ದು ಬಂಧಿತನಿಂದ 3 ಲಕ್ಷದ ಮೌಲ್ಯದ ವಾಹನ ವಶಕ್ಕೆ ಪಡೆಯಲಾಗಿದ್ದು ಮುಂದಿನ ಕ್ರಮ ಕೈಗೊಳ್ಳಲಾಗಿದೆ.

error: Content is protected !!