ಅಂಗವೈಕಲ್ಯ ಶಾಪವಲ್ಲ, ಸಮಾಜಸೇವೆ ಮಾಡುವುದಕ್ಕೆ ಮನಸ್ಸುಬೇಕು…!


ವಿಶೇಷ ವರದಿ: ಗಿರಿಧರ್ ಕೊಂಪುಳೀರಾ

ಕೊಡಗು: ಲಾಕ್ ಡೌನ್,ಸೀಲ್ಡೌನ್,144 ಸೆಕ್ಷನ್ ಹೀಗೆ ಕೊರೊನಾ ತಡೆಗಟ್ಟಲು ಸರ್ಕಾರ ಏನೇ ಕ್ರಮ ಕೈಗೊಳ್ಳಲಿ ನಮ್ಮ ಜನ ಮಾತ್ರ ರೋಡ್ ಖಾಲಿ ಇದೆ ಎಂದು ರಾಜಾರೋಷವಾಗಿ ಓಡಾಡುವುದಕ್ಕೆ ಮುಂದಾಗುತ್ತಾರೆ,ಕಡೆಗೆ ಪೋಲಿಸರಿಂದ ಏಟು ತಿಂದು ವಾಹನ ಸೀಜ್ ಆಗಿ ಮನೆ ಸೇರುತ್ತಾರೆ,ಇಲ್ಲಾ ದಂಡ ತೆತ್ತುತ್ತಾರೆ. ಆದರೆ ಇಲ್ಲಿನ ಸಿದ್ದಾಪುರದಲ್ಲಿ ಒಬ್ಬ ಯುವಕನಿದ್ದಾನೆ,ಈತನ ಹೆಸರು ಮಂಜುನಾಥ್ ಅಂಗವಿಕಲ ಆದರೆ ಸಮಾಜಮುಖಿ ಮಾಡುವ ಮನಸ್ಸಿರುವ ವ್ಯಕ್ತಿ.

ಕೊರೊನಾ ಎರಡನೇ ಹಂತ ಆರಂಭವಾಗುತ್ತಿದ್ದಂತೆ ಮಂಜು ತನ್ನ ಒಂದು ಅಟ್ಲಾಸ್ ಸೈಕಲ್ ಗೆ ಮೈಕ್ರೋ ಫೋನ್ ಸಿಕ್ಕಿಸಿ ಬೀದಿಗೆ ಇಳಿದರೆ ಕೊರೊನಾ ಜಾಗೃತಿ ಗ್ಯಾರಂಟಿ.ನೆಲ್ಯುದಿಕೇರಿ,ಸಿದ್ದಾಪುರ ಭಾಗದಲ್ಲಿ ಕಾರ್ಮಿಕ ವರ್ಗದವರ ಜನಸಾಂದ್ರತೆ ಹೆಚ್ಚಿರುವ ಕಾರಣ ಬಸ್ ನಿಲ್ದಾಣ,ಮಾರುಕಟ್ಟೆ,ಆಸ್ಪತ್ರೆ,ದೇವಾಲಯ ಹೀಗೆ ಒಂದಾ ಎರಡಾ ಒಟ್ಟಿನಲ್ಲಿ ಜಾಗೃತಿ ಮೂಡಿಸಬೇಕು ಎನ್ನುವುದು ಮಂಜುವಿನ ಗುರಿ, ಈ ಕಾಳಜಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪಾಲಿಬೆಟ್ಟದ ಚೆಶೈರ್ ಹೋಮ್ ಶಾಲೆಯ ವಿಶೇಷಚೇತನವಾಗಿರುವ ಮಂಜುನಾಥ್ ಹಲವಾರು ತರಬೇತಿ ಪಡೆದುಕೊಂಡಿದ್ದು,ಅಲ್ಲಿನ ತರಬೇತಿ ಇಲ್ಲಿ ಪ್ರಯೋಗಿಸುತ್ತಿರುವುದು ಕಲಿತ ವಿದ್ಯೆಗೆ ಸಾರ್ಥಕವೆನಿಸುತ್ತಿದೆ ಈ ಕಾರ್ಯ.
ಮೊಬೈಲ್ ಗೀತೆ:ಇನ್ನು ಒಂದು ಹಂತದಲ್ಲಿ ತನ್ನ ಮೊಬೈಲ್ ನಲ್ಲಿ ಇರುವ ಜಾಗೃತಿ ಸಂದೇಶವನ್ನೂ ತಾನು ಸಂಚರಿಸುವ ಮಾರ್ಗದ ಉದ್ದಕೂ ಹಾಕಿಕೊಂಡು ಓಡಾಡುತ್ತಾ ಆಕರ್ಷಣೆಯ ಕೇಂದ್ರ ಬಿಂಧುವಾಗಿದ್ದಾನೆ.ಒಟ್ಟಿನಲ್ಲಿ,ಮಾಸ್ಕ್ ಧರಿಸಿ, ಸ್ಯಾನಿಟೈಝರ್ ಬಳಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎನ್ನುವ ಈತನ ಮುಗ್ಧತೆಯ ಕಾಳಜಿ ನಿಜಕ್ಕೂ ಶ್ಲಾಘನೀಯ.

error: Content is protected !!