ಅಂಕಿತಾ ಸುರೇಶ್ ಗೆ ಪ್ರೋತ್ಸಾಹ ಧನ ಕೊಡುಗೆ ಘೋಷಿಸಿದ ರಾಜ್ಯಪಾಲರು

ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾರತ ಮಹಿಳಾ ಹಾಕಿ ತಂಡದ ಸಹಾಯಕ ತರಬೇತುದಾರರಾಗಿದ್ದ ಕೊಡಗು ಮೂಲದ ಅಂಕಿತಾ ಸುರೇಶ್ ಸೇರಿದಂತೆ ಕರ್ನಾಟಕದ ನಾಲ್ವರು ಕ್ರೀಡಾಪಟುಗಳಿಗೆ ಕರ್ನಾಟಕ ರಾಜ್ಯಪಾಲರು ತಲಾ ಒಂದು ಲಕ್ಷ ರೂಪಾಯಿ ಪ್ರೋತ್ಸಾಹ ಧನ ಘೋಷಿಸಿದ್ದಾರೆ.
ಅಂತೆಯೇ ಈ ನಾಲ್ವರಿಗೆ ಶೀಘ್ರದಲ್ಲೇ ರಾಜ ಭವನದಲ್ಲಿ ಗೌರವ ಸನ್ಮಾನ ನೀಡುವುದಾಗಿ ರಾಜ್ಯಪಾಲರು ತಿಳಿಸಿದ್ದಾರೆ.