ಅಂಕಿತಾರನ್ನು ಸನ್ಮಾನಿಸಿದ ಸಿಎಂ

ಭಾರತೀಯ ಹಾಕಿ ತಂಡದ ಸಹಾಯಕ ಕೋಚ್ ಅಂಕಿತಾ ಸುರೇಶ್ ರವರಿಗೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನಲ್ಲಿ ಸನ್ಮಾನ ನಡೆಸಿದರು.

ಮೂಲತಃ ಕೊಡಗಿನ ಸುಂಟಿಕೊಪ್ಪದವರಾದ ಅಂಕಿತಾ ನವದೆಹಲಿಯಲ್ಲಿ ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿರವರ ಆಹ್ವಾನ ಇರುವ ಹಿನ್ನಲೆಯಲ್ಲಿ ತೆರಳುವ ಮುನ್ನ ಮುಖ್ಯ ಮಂತ್ರಿಗಳು ಸನ್ಮಾನಿಸಿದರು.